alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲಿ ಕೂಡಿಟ್ರೂ ಎಸ್ಕೇಪ್ ಆಗ್ತಾರೆ ಈ ಪ್ರಚಂಡ ಪುಟಾಣಿಗಳು

twins-650_650x400_41497503807

ಅವಳಿ ಮಕ್ಕಳು ತೊಟ್ಟಿಯಿಂದ ಎಸ್ಕೇಪ್ ಆಗಿರೋ ವಿಡಿಯೋ ವೈರಲ್ ಆಗಿದೆ. ಅಮೆರಿಕದ ನ್ಯೂಜೆರ್ಸಿಯಲ್ಲಿರೋ ಗ್ರೇಸನ್ ಮತ್ತು ಜುದಾ ಅಲ್ಡೆರ್ಸ್ ಎಂಬ ಈ ಪುಟ್ಟ ಸಹೋದರರ ಸಾಹಸ ಭಾರೀ ಮೆಚ್ಚುಗೆಗೂ ಪಾತ್ರವಾಗಿದೆ. ಬೇಬಿ ಕ್ಯಾಮರಾದಲ್ಲಿ ಅವಳಿ ಮಕ್ಕಳ ತಾಯಿ ಚೆಲ್ಸಿಯಾ ಈ ದೃಶ್ಯವನ್ನು ಸೆರೆಹಿಡಿದಿದ್ದಾಳೆ.

ಈ ಪುಟಾಣಿಗಳಿಗೆ 2 ವರ್ಷ ವಯಸ್ಸು, ತುಂಬಾನೇ ತುಂಟರು. ಹಾಗಾಗಿ ತಾಯಿ ಚೆಲ್ಸಿಯಾ ಮಕ್ಕಳನ್ನು ಈ ತೊಟ್ಟಿಯಲ್ಲಿ ಕೂಡಿಡ್ತಾಳೆ. ಅವರ ಹಾವಳಿ ತಡೆಯಲು ಸಾಧ್ಯವಿಲ್ಲ ಅಂತಾ ಈ ಪ್ಲಾನ್ ಮಾಡಿದ್ದಾರೆ. ಆದ್ರೆ ಇವರು ಮಾತ್ರ ಪ್ರಚಂಡ ಪುಟಾಣಿಗಳು.

ಅಮ್ಮನಿಗಿಂತ್ಲೂ ಒಂದ್ಹೆಜ್ಜೆ ಮುಂದೆಯೇ ಇದ್ದಾರೆ. ಒಬ್ಬರಿಗೊಬ್ಬರು ಸಹಾಯ ಮಾಡ್ತಾ ಸಲೀಸಾಗಿ ತೊಟ್ಟಿಯಿಂದ ಹೊರಕ್ಕೆ ಬಂದಿದ್ದಾರೆ. ಒಂದು ಮಗು ಮೊದಲು ಮೇಲಕ್ಕೇರಲು ಪ್ರಯತ್ನಿಸಿ ವಿಫಲವಾಗಿತ್ತು. ಆಗ ಇನ್ನೊಂದು ಮಗು ಸಹೋದರನಿಗೆ ಸಹಾಯ ಮಾಡಿದೆ. ನಂತರ ತಾನೂ ತೊಟ್ಟಿಯಿಂದ ಹೊರಕ್ಕೆ ಬಂದಿದೆ. ಕಳೆದ ವಾರ ಕೂಡ ಇಂಥದ್ದೇ ವಿಡಿಯೋ ಒಂದು ವೈರಲ್ ಆಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...