alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಶದ ಹುಡುಗಿಯರನ್ನು ಮದುವೆಯಾದ್ರೆ ಸಿಗುತ್ತೆ 3 ಲಕ್ಷ ರೂ..!?

untitled-12-1494501396

ಮದುವೆಯಾದ ಪುರುಷರು ಯಾಕಪ್ಪ ಮದುವೆಯಾದೆ ಅಂತಾ ಗೊಣಗ್ತಾರೆ. ಮದುವೆಯಾದ್ಮೇಲೆ ಜವಾಬ್ದಾರಿ ಹೆಚ್ಚಾಗುತ್ತದೆ. ದುಡಿದು ದುಡಿದು ಜೀವ ಸವೆದು ಹೋಗಿದೆ ಎನ್ನುವವರೂ ಇದ್ದಾರೆ. ಇನ್ನೂ ಮದುವೆಯಾಗದ ಯುವಕರಿಗೆ ಮದುವೆಯಾಗಬೇಡ್ರಪ್ಪಾ ಅಂತಾ ಸಲಹೆ ನೀಡುವ ಗಂಡಸರೂ ಇದ್ದಾರೆ. ಆದ್ರೆ ಇತ್ತೀಚೆಗೆ ವೈರಲ್ ಆಗಿದ್ದ ಸುದ್ದಿಯೊಂದು ಯುವಕರ ಉತ್ಸಾಹವನ್ನು ಹೆಚ್ಚಿಸಿತ್ತು.

ಮದುವೆಯಾದ್ಮೇಲೆ ಆರಾಮಾಗಿರಬೇಕು. ನೆಮ್ಮದಿಯಿಂದಿರಬೇಕು ಎಂದುಕೊಂಡ ಹುಡುಗರು ಐಸ್ಲ್ಯಾಂಡ್ ಹುಡುಗಿಯರಿಗೆ ಗಾಳ ಹಾಕಲು ಮುಂದಾಗಿದ್ದರು. ಐಸ್ಲ್ಯಾಂಡ್ ಸರ್ಕಾರ ಅಲ್ಲಿನ ಹುಡುಗಿಯರನ್ನು ಮದುವೆಯಾದ್ರೆ ತಿಂಗಳಿಗೆ ಮೂರು ಲಕ್ಷ ರೂಪಾಯಿ ನೀಡುತ್ತೆ. ಇದ್ರ ಜೊತೆಗೆ ಐಸ್ಲ್ಯಾಂಡ್ ಪೌರತ್ವವನ್ನು ಉಚಿತವಾಗಿ ನೀಡುತ್ತೆ ಎಂಬ ಸುದ್ದಿ ಇದಕ್ಕೆ ಕಾರಣವಾಗಿತ್ತು.

ಹುಡುಗ ತನಗಿಷ್ಟವಾಗುವ ಹುಡುಗಿಯನ್ನು ಮದುವೆಯಾಗಬಹುದು. ಆದ್ರೆ ಮದುವೆಯಾದ್ಮೇಲೆ ಅಲ್ಲಿಯೇ ವಾಸ ಮಾಡಬೇಕು. ಉತ್ತರ ಆಫ್ರಿಕಾದ ಜನರಿಗೆ ಹೆಚ್ಚು ಆದ್ಯತೆ ನೀಡಲಾಗ್ತಿದೆ ಎಂಬ ಒಂದು ಸುದ್ದಿ ಪ್ರಕಟವಾಗಿತ್ತು. ವೆಬ್ಸೈಟ್ ನಲ್ಲಿ ಸುದ್ದಿ ನೋಡಿದ ಐಸ್ಲ್ಯಾಂಡ್ ಹುಡುಗಿಯರು ಬೇರೆ ದೇಶದ ಹುಡುಗರಿಗೆ ಫೇಸ್ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲು ಶುರುಮಾಡಿದ್ದರು. ಆದ್ರೆ ಈ ವಿಷ್ಯ ತಿಳಿದ ಐಸ್ಲ್ಯಾಂಡ್ ಸರ್ಕಾರ ನಾವು ಇಂತ ಘೋಷಣೆ ಮಾಡೇ ಇಲ್ಲ ಎಂದುಬಿಡ್ತು. ಜೊತೆಗೆ ವಿದೇಶಿಗರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಹುಡುಗಿಯರ ವಿರುದ್ಧ ವಿಚಾರಣೆ ಶುರುಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...