alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಕೊರಿಯರ್ ಮೂಲಕ ಹುಲಿ ಮರಿ ಸಾಗಣೆ

ಪ್ರಾಣಿಗಳ ಅಕ್ರಮ ಸಾಗಾಣಿಕೆ ಒಂದು ಗಂಭೀರ ಅಪರಾಧವಾಗಿದ್ದು, ಅದರಲ್ಲೂ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ರಕ್ಷಣೆಗಾಗಿ ಅಂತಹ ಪ್ರಾಣಿಗಳ ಸಾಗಾಣಿಕೆಗೆ ಯತ್ನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಇದರ ನಡುವೆಯೂ ಪ್ರಾಣಿಗಳ ಕಳ್ಳ ಸಾಗಾಣಿಕೆ ನಡೆಯುತ್ತಿದ್ದು, ಅಂತಹ ಪ್ರಕರಣವೊಂದರ ವರದಿ ಇಲ್ಲಿದೆ. ಕೊರಿಯರ್ ಮೂಲಕ ಬೆಂಗಾಲ್ ಟೈಗರ್ ತಳಿಗೆ ಸೇರಿದ ಹುಲಿಮರಿಯನ್ನು ಕೊರಿಯರ್ ಮೂಲಕ ಸಾಗಿಸಲಾಗುತ್ತಿದ್ದು, ಅದನ್ನು ಪತ್ತೆ ಹಚ್ಚಿ ಹುಲಿ ಮರಿಯನ್ನು ವಶಕ್ಕೆ ಪಡೆಯಲಾಗಿದೆ.

ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದ್ದು, ಜಾಲಿಸ್ಕೊದಿಂದ ಕ್ವೆರಿ ಟಾರೋಗೆ ಕೊರಿಯರ್ ಮೂಲಕ ಈ ಹುಲಿಮರಿಯನ್ನು ಸಾಗಿಸಲಾಗುತ್ತಿತ್ತು. ಚಿಕ್ಕ ಕಂಟೈನರ್ ಬಂದರಲ್ಲಿ ಈ ಹುಲಿ ಮರಿಯನ್ನು ಹಾಕಿದ್ದು, ಗಾಳಿಯಾಡಲು ಸ್ವಲ್ಪ ಜಾಗವನ್ನು ಬಿಡಲಾಗಿತ್ತು. ಮೆಕ್ಸಿಕೋದ ಲಕೆಫೇಕ್ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಪೊಲೀಸ್ ಶ್ವಾನಗಳು ಇದನ್ನು ಪತ್ತೆ ಹಚ್ಚಿದ್ದು, ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...