alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯೂಸಿಯಂ ಆಗಲಿದೆ ಥಾಯ್ಲೆಂಡ್ ನ ಥಾಮ್ಲಾಂಗ್ ಗುಹೆ

12 ಮಂದಿ ಬಾಲಕರು ಮತ್ತು ಫುಟ್ಬಾಲ್ ಕೋಚ್ ದುರ್ಗಮ ಥಾಮ್ಲಾಂಗ್ ಗುಹೆಯಿಂದ ಜೀವ ಉಳಿಸಿಕೊಂಡು ಬಂದಾಯ್ತು. ಹಾಗಂತಾ ಅಲ್ಲಿಗೆ ಎಲ್ಲವು ಮುಗಿದಿಲ್ಲ. 19 ದಿನಗಳ ಕಾಲ ಇಡೀ ವಿಶ್ವದ ಗಮನ ಸೆಳೆದಿದ್ದ ಥಾಮ್ಲಾಂಗ್ ಗುಹೆ ಇನ್ನು ಮುಂದೆ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.

ಹೇಗೆ ಅಂತೀರಾ..? ಥಾಮ್ಲಾಂಗ್ ಗುಹೆಯನ್ನ ಮ್ಯೂಸಿಯಂ ಆಗಿ ಬದಲಾಯಿಸೋಕೆ ಥೈಲ್ಯಾಂಡ್ ಸರ್ಕಾರ ನಿರ್ಧರಿಸಿದೆ.

ಹೌದು. ದುರ್ಗಮವಾಗಿರುವ ಥಾಮ್ಲಾಂಗ್ ಗುಹೆಯನ್ನ ಥೈಲ್ಯಾಂಡ್ ನ ಪ್ರವಾಸಿ ತಾಣವನ್ನಾಗಿ ಬದಲಾಯಿಸುವ ನಿಟ್ಟಿನಲ್ಲಿ ಥಾಯ್ ಸರ್ಕಾರ ಚಿಂತನೆ ನಡೆಸಿದೆ. ಈ ಗುಹೆಯ ಬಗ್ಗೆ ಸೂಕ್ತ ಅಧ್ಯಯನ ನಡೆಸಿರುವ ಪ್ರವಾಸಿ ಗೈಡ್ಗಳನ್ನ ನೇಮಿಸೋದಕ್ಕೆ ಥಾಯ್ ಸರ್ಕಾರ ಚಿಂತನೆ ನಡೆಸಿದೆ.

ಇಡೀ ವಿಶ್ವದ ಗಮನ ಸೆಳೆದ ಗುಹೆ ಮುಂದೆಯೂ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಲಿರೋದನ್ನು ಅರಿತಿರುವ ಸರ್ಕಾರ, ಇನ್ನು ಕೆಲ ದಿನದಲ್ಲೇ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನ ಶುರುಮಾಡಲಿದೆಯಂತೆ.

ಸಾಹಸಮಯ ಚಟುವಟಿಕೆಯನ್ನ ತಾಣವನ್ನಾಗಿಯೂ ಈ ಗುಹೆಯಲ್ಲಿ ಕೆಲವು ಮಾರ್ಪಾಡುಗಳನ್ನ ಮಾಡಲಾಗುತ್ತದೆಯಂತೆ. ಆ ಮೂಲಕ ಅಡ್ವೆಂಚರ್ ಗಾಗಿ ಚಾರಣ ಕೈಗೊಳ್ಳೋರಿಗೂ ಇನ್ನು ಮುಂದೆ ಥಾಮ್ಲಾಂಗ್ ಗುಹೆಗೆ ಪ್ರವೇಶ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...