alex Certify
ಕನ್ನಡ ದುನಿಯಾ       Mobile App
       

Kannada Duniya

ಗುಹೆಯಲ್ಲಿ ಸಿಲುಕಿರುವ ಫುಟ್ಬಾಲ್ ಆಟಗಾರರ ರಕ್ಷಣೆಗೆ ಈ ಕೆಲಸ ಮಾಡ್ತಿದೆ ಸೇನೆ

ಥೈಲ್ಯಾಂಡ್ ನ ಗುಹೆ ಥೈಮ್ ಲುವಾಂಗ್ ನಲ್ಲಿ ಸಿಲುಕಿರುವ 12 ಫುಟ್ಬಾಲ್ ಆಟಗಾರರ ಬಗ್ಗೆ ಈವರೆಗೂ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಅಂಡರ್ 16 ಫುಟ್ಬಾಲ್ ತಂಡದ ಆಟಗಾರರು ಗುಹೆಯಲ್ಲಿ ಸಿಲುಕಿದ್ದು, ಕೋಚ್ ಕೂಡ ಆಟಗಾರರ ಜೊತೆಗಿದ್ದಾರೆ. ಎಲ್ಲ ಆಟಗಾರರ ವಯಸ್ಸು 11 ರಿಂದ 16 ವರ್ಷ ಎನ್ನಲಾಗಿದೆ.

ಒಂಭತ್ತು ದಿನಗಳ ಹಿಂದೆ ಫುಟ್ಬಾಲ್ ಆಟಗಾರರು ಪಂದ್ಯ ಮುಗಿಸಿ ಕೋಚ್ ಜೊತೆ ಗುಹೆಯೊಳಗೆ ಹೋಗಿದ್ದರು. ಈ ವೇಳೆ ಮಳೆ ಬಂದು ಗುಹೆಯೊಳಗೆ ನೀರು ಸೇರಿದೆ. ಇದ್ರಿಂದ ಮುಖ್ಯದ್ವಾರ ಬಂದ್ ಆಗಿದೆ. ಕಳೆದ 9 ದಿನಗಳಿಂದ ಫುಟ್ಬಾಲ್ ಆಟಗಾರರ ಪತ್ತೆಗೆ ಸತತ ಪ್ರಯತ್ನ ನಡೆಯುತ್ತಿದೆ. ಆದ್ರೆ ಆಟಗಾರರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆಟಗಾರರು ಗುಹೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಇಲ್ಲ ಎಲ್ಲರೂ ಸಾವನ್ನಪ್ಪಿದ್ದಾರೆ ಎಂಬ ಸಂಶಯ ಕಾಡ್ತಿದೆ.

ಫುಟ್ಬಾಲ್ ಆಟಗಾರರ ರಕ್ಷಣೆಗೆ ಸೇನೆ ಕೆಲಸ ಶುರು ಮಾಡಿದೆ. ಈಗಾಗಲೇ ಗುಹೆಯ ಒಳಗೆ ಆಮ್ಲಜನಕದ ಸಿಲಿಂಡರ್ ಇಡಲಾಗ್ತಿದೆ. ಹಗ್ಗದ ವ್ಯವಸ್ಥೆ ಕೂಡ ಮಾಡಲಾಗಿದೆ. ಗುಹೆಯ ಮೇಲ್ಭಾಗದಲ್ಲಿ ಸಣ್ಣ ತೂತು ಮಾಡಲಾಗ್ತಿದೆ. ಮಕ್ಕಳು ಗುಹೆಯ ಮೇಲ್ಭಾಗ ತಲುಪಿದ್ದರೆ ಜೀವಂತವಾಗಿರುವ ಸಾಧ್ಯತೆ ಹೆಚ್ಚಿದೆ. ಅವ್ರ ಬಳಿ ನೀರಿದೆ ಎಂದು ಮೂಲಗಳು ಹೇಳಿವೆ. ಸುಮಾರು 200 ಆಕ್ಸಿಜನ್ ಸಿಲಿಂಡರ್ ಗುಹೆ ತಲುಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...