alex Certify
ಕನ್ನಡ ದುನಿಯಾ       Mobile App
       

Kannada Duniya

ಡಯಟ್ ಮಾಡ್ತಿದೆ ಥೈಲ್ಯಾಂಡ್ ನ ‘ಅಂಕಲ್ ಫ್ಯಾಟ್’ ಕೋತಿ

thailand-chunky-monkey_9c8d64d6-3c75-11e7-b517-0cbfa8e97d3f

ಥೈಲ್ಯಾಂಡ್ ನಲ್ಲಿ ಪ್ರವಾಸಿಗರು ಬಿಸಾಡಿದ ಜಂಕ್ ಫುಡ್ ತಿಂದು ತಿಂದು ಕೋತಿಯೊಂದು ದಪ್ಪಗಾಗಿ ಬಿಟ್ಟಿತ್ತು. ಆ ಕೋತಿಯನ್ನು ರಕ್ಷಣೆ ಮಾಡಿರೋ ಅರಣ್ಯಾಧಿಕಾರಿಗಳು ಫುಲ್ ಡಯಟ್ ನಲ್ಲಿಟ್ಟಿದ್ದಾರೆ. ಮಂಗಣ್ಣನಿಗೆ ಈಗ ಹಣ್ಣು ಮತ್ತು ತರಕಾರಿ ಬಿಟ್ರೆ ಇನ್ನೇನನ್ನೂ ಕೊಡ್ತಿಲ್ಲ. ‘ಅಂಕಲ್ ಫ್ಯಾಟ್’ ಅಂತಾನೇ ಈ ಕೋತಿ ಫೇಮಸ್ ಆಗಿದೆ.

ಪ್ರವಾಸಿಗರು ಈ ಡುಮ್ಮ ಕೋತಿಯ ಫೋಟೋವನ್ನು ಸಾಮಾಜಿಕ ತಾಣಗಳಲ್ಲೂ ಅಪ್ ಲೋಡ್ ಮಾಡಿದ್ದಾರೆ. ಥೈಲ್ಯಾಂಡ್ ನಲ್ಲಿ ಆರಾಮಾಗಿ ಓಡಾಡಿಕೊಂಡಿರುವ  ಮಂಗಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಪ್ರವಾಸಿಗರು ಅವುಗಳಿಗೆ ಆಹಾರ ಹಾಕಿ, ಆಟವಾಡೋದು ಕಾಮನ್. ಈ ಮಂಗಗಳ ಸರಾಸರಿ ತೂಕ 9 ಕೆಜಿ.

thailand-chunky-monkey_f1dbc5f4-3c75-11e7-b517-0cbfa8e97d3f

ಆದ್ರೆ ‘ಅಂಕಲ್ ಫ್ಯಾಟ್’ ಕೋತಿಯ ತೂಕ 26 ಕೆಜಿ. ಎಪ್ರಿಲ್ 27ರಂದು ಈ ಕೋತಿಯನ್ನು ಸೆರೆಹಿಡಿಯಲಾಗಿದೆ. ಕೋತಿಗಳ ಸಾಮ್ರಾಜ್ಯಕ್ಕೆ ನಾಯಕನಾಗಿದ್ದ ಅಂಕಲ್ ಫ್ಯಾಟ್, ಉಳಿದ ಮಂಗಗಳಿಗೆ ಹೊಡೆಯೋದು, ಜಗಳವಾಡೋದು ಮಾಡ್ತಿದ್ದ. ತೂಕ ಹೆಚ್ಚಾಗಿರೋದ್ರಿಂದ ಕೋತಿಗೆ ಹೃದಯದ ಸಮಸ್ಯೆ ಹಾಗೂ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿದೆ.

10-15 ವರ್ಷದ ಈ ಕೋತಿಯ ತೂಕವನ್ನು ಹೇಗಾದ್ರೂ ಇಳಿಸಲೇಬೇಕು ಅಂತಾ ದಿನಕ್ಕೆ ಎರಡು ಬಾರಿ ಮಾತ್ರ ಹಣ್ಣು ತರಕಾರಿಗಳನ್ನು ಕೊಡಲಾಗ್ತಿದೆ. ಜಂಕ್ ಫುಡ್ ಗಳಿಂದ ಮನುಷ್ಯರಿಗೆ ಮಾತ್ರವಲ್ಲ, ಕೋತಿಗಳಿಗೂ ಎಷ್ಟು ಅಪಾಯವಿದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...