alex Certify
ಕನ್ನಡ ದುನಿಯಾ       Mobile App
       

Kannada Duniya

ಫುಟ್ಬಾಲ್ ಆಟಗಾರರ ರಕ್ಷಣೆಗಾಗಿ ಗುಹೆಯೊಳಗೆ ಹೋದ ಅಧಿಕಾರಿ ಉಸಿರುಗಟ್ಟಿ ಸಾವು

ಥೈಲ್ಯಾಂಡ್ ನ ಗುಹೆಯಲ್ಲಿ  ಸಿಲುಕಿರುವ 12 ಫುಟ್ಬಾಲ್ ಆಟಗಾರರ ರಕ್ಷಣೆ ಕಾರ್ಯ ಮುಂದುವರೆದಿದೆ. ಫುಟ್ಬಾಲ್ ಆಟಗಾರರ ರಕ್ಷಣೆಗೆ ಬಂದ ಮಾಜಿ ಕಮಾಂಡೋ ಸಾವನ್ನಪ್ಪಿದ್ದಾರೆ. ಆದಾಗ್ಯೂ ರಕ್ಷಣಾ ಕಾರ್ಯ ಮುಂದುವರೆದಿದೆ. ಪ್ರತಿಕೂಲ ಹವಾಮಾನ ಮಕ್ಕಳ ರಕ್ಷಣೆಗೆ ಅಡ್ಡಿಯುಂಟು ಮಾಡ್ತಿದೆ.

ಹವಾಮಾನ ಇಲಾಖೆ ಇನ್ನೆರಡು ದಿನಗಳ ನಂತ್ರ ಸತತ ಒಂದು ವಾರಗಳ ಕಾಲ ಭಾರೀ ಮಳೆಯಾಗಲಿದೆಯೆಂಬ ಎಚ್ಚರಿಕೆ ನೀಡಿದೆ. ಮಕ್ಕಳ ರಕ್ಷಣೆಗೆ ಹೋಗಿದ್ದ ಮಾಜಿ ಕಮಾಂಡರ್ ಒಬ್ಬರು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಹಾಗಾಗಿ ಈ ಮಾರ್ಗದಿಂದ ಮಕ್ಕಳ ರಕ್ಷಣೆ ಅಸಾಧ್ಯ ಎನ್ನಲಾಗ್ತಿದೆ. ಸ್ವಇಚ್ಛೆಯಿಂದ ಮಕ್ಕಳ ರಕ್ಷಣೆಗೆ ಬಂದಿದ್ದ ಅಧಿಕಾರಿ ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆಂದು ಮೂಲಗಳು ಹೇಳಿವೆ.

ಅನುಭವಿ ಕಮಾಂಡೋ ವಾಪಸ್ ಬರ್ತಿದ್ದ ವೇಳೆ ಆಮ್ಲಜನಕ ಕೊರತೆಯಾಗಿ ಸಾವನ್ನಪ್ಪಿದ್ದಾರಂತೆ. ಕಮಾಂಡೋ ಪ್ರಜ್ಞೆ ತಪ್ಪಿದ್ರು. ಅವ್ರ ರಕ್ಷಣೆ ಸಾಧ್ಯವಾಗಲಿಲ್ಲ ಎಂದಿರುವ ಅಧಿಕಾರಿಗಳು ಮಕ್ಕಳ ರಕ್ಷಣೆ ವೇಳೆ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳುತ್ತೇವೆಂದು ಭರವಸೆ ನೀಡಿದ್ದಾರೆ.

ಗುಹೆಯೊಳಗೆ ಅಂಡರ್ -19 ಫುಟ್ಬಾಲ್ ಆಟಗಾರರ ಜೊತೆ ಕೋಚ್ ಕೂಡ ಸಿಕ್ಕಿಬಿದ್ದಿದ್ದಾರೆ. ಮಕ್ಕಳಿಗೆ ಸಮಸ್ಯೆ ಆಗದಿರಲಿ ಎನ್ನುವ ಕಾರಣಕ್ಕೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ತರಲು ಇನ್ನೂ ಒಂದು ತಿಂಗಳು ಹಿಡಿಯುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...