alex Certify
ಕನ್ನಡ ದುನಿಯಾ       Mobile App
       

Kannada Duniya

ಗುರುವಾರದಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ‘ಥಾಯ್ ಬಾಯ್ಸ್’

ಎರಡು ವಾರಗಳ ಕಾಲ ಗುಹೆಯಲ್ಲಿ ಸಿಲುಕಿದ್ದರೂ ವಿಶ್ವದ ಜನತೆಯ ಪ್ರಾರ್ಥನೆ ಹಾಗೂ ಪರಿಣಿತರ ಕಾರ್ಯಾಚರಣೆಯಿಂದ ಮೃತ್ಯುವಿನ ದವಡೆಯಿಂದ ಪಾರಾಗಿ ಬಂದಿರುವ 12 ಮಂದಿ ಥಾಯ್ ಬಾಲಕರು ಹಾಗೂ ಅವರ ಕೋಚ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾನಸಿಕವಾಗಿ ಇವರುಗಳೆಲ್ಲರೂ ಸದೃಢವಾಗಿದ್ದರೂ ದೈಹಿಕವಾಗಿ ಬಳಲಿರುವ ಕಾರಣ ಗುಹೆಯಿಂದ ಹೊರ ಕರೆದುಕೊಂಡು ಬಂದ ಕೂಡಲೇ ಇವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರದಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಥಾಯ್ಲೆಂಡ್ ಆರೋಗ್ಯ ಸಚಿವರು, 13 ಮಂದಿಯೂ ಈಗ ಮಾನಸಿಕ ಹಾಗೂ ದೈಹಿಕವಾಗಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಗುರುವಾರದಂದು ಇವರುಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದ್ದು, ತಮ್ಮ ತಮ್ಮ ಮನೆಗಳಿಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯಲ್ಲಿರುವ ಬಾಲಕರ ವಿಡಿಯೋ ಬಿಡುಗಡೆ ಮಾಡಿದ್ದು ಇದರಲ್ಲಿ ತಮ್ಮ ನೆರವಿಗೆ ಧಾವಿಸಿದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಗುಹೆಯಲ್ಲಿ ಸಿಲುಕಿಕೊಂಡಿದ್ದ ವೇಳೆ ಬಾಲಕರು ಮೂರರಿಂದ ನಾಲ್ಕು ಕೆಜಿ ತೂಕ ಕಳೆದುಕೊಂಡಿದ್ದು, ವೈದ್ಯರ ಆರೈಕೆಯಲ್ಲಿ ಇದೀಗ ಎಂದಿನ ತೂಕ ಗಳಿಸಿಕೊಂಡಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...