alex Certify
ಕನ್ನಡ ದುನಿಯಾ       Mobile App
       

Kannada Duniya

8.5 ಕೋಟಿ ಲಾಟರಿ ಹೊಡೆದ್ರೂ ಸಿಗಲಿಲ್ಲ ಹಣ, ಹತಾಶನಾದ ಆತ ಮಾಡಿದ್ದೇನು?

ಲಾಟರಿ ಗೆಲ್ಲೋದು ನಿಜಕ್ಕೂ ಸಂಭ್ರಮದ ಸಂಗತಿ. ಆದ್ರೆ ಕೆಲವೊಮ್ಮೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ. ಅಂತಹ ದುರಾದೃಷ್ಟವಂತನೊಬ್ಬ ತನ್ನ ಹಣೆಬರಹವನ್ನು ಹಳಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಥೈಲ್ಯಾಂಡ್ ನ ಜಿರಾವುಟ್ ಪೊಂಗ್ಫಾನ್ ಎಂಬಾತನಿಗೆ 8.5 ಕೋಟಿ ರೂಪಾಯಿ ಲಾಟರಿ ಹೊಡೆದಿತ್ತು. ಮರುದಿನ ಹೋಗಿ ಲಾಟರಿಯಲ್ಲಿ ಗೆದ್ದ ಹಣ ಪಡೆಯೋಣ ಅಂತಾ ಆತ ಲೆಕ್ಕ ಹಾಕಿದ್ದ. ಆದ್ರೆ ಅವನ ಲಾಟರಿ ಟಿಕೆಟ್ ಕಾಣೆಯಾಗಿತ್ತು.

ಟಿಕೆಟ್ ಇಲ್ಲದೇ ಹಣ ಪಡೆಯೋದು ಅಸಾಧ್ಯ. 8.5 ಕೋಟಿ ರೂಪಾಯಿ ಸಿಕ್ಕಿದ್ರೆ ತನ್ನ ಬದುಕು ಯಾವ ರೀತಿ ಬದಲಾಗುತ್ತಿತ್ತು ಅನ್ನೋದನ್ನು ಊಹಿಸಿಕೊಂಡೇ ಜಿರಾವುಟ್ ಹತಾಶನಾಗಿದ್ದ. ಇದೇ ಬೇಸರದಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆ ಟಿಕೆಟ್ ಎಲ್ಲಿ ಹೋಯ್ತು ಅನ್ನೋದು ಇನ್ನೂ ನಿಗೂಢವಾಗಿದೆ. ಯಾರಾದ್ರೂ ಕದ್ದಿದ್ದಾರಾ? ಅಥವಾ ಕಳೆದು ಹೋಗಿದ್ಯಾ? ಇನ್ಯಾರಿಗಾದ್ರೂ ಸಿಕ್ಕಿದೆಯಾ ಅನ್ನೋದು ಸ್ಪಷ್ಟವಾಗಿಲ್ಲ. ಈವರೆಗೆ ಹಣ ಪಡೆಯಲು ಯಾರೂ ಮುಂದೆ ಬಂದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...