alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವಿನೊಂದಿಗೆ ನಡೀತು ಮದುವೆ, ಹನಿಮೂನ್

voran

ಥಾಯ್ ಲ್ಯಾಂಡ್ ಯುವಕನೊಬ್ಬ ಹಾವನ್ನೇ ಮದುವೆಯಾಗಿದ್ದಲ್ಲದೇ, ಅದರೊಂದಿಗೆ ಸಂಸಾರ ನಡೆಸುತ್ತಿರುವ ವಿಲಕ್ಷಣ ಘಟನೆ ವರದಿಯಾಗಿದೆ.

ತನ್ನ ಪ್ರಿಯತಮೆ ಮೃತಪಟ್ಟ ನಂತರ ಹಾವಿನ ರೂಪದಲ್ಲಿ ಜನ್ಮ ತಾಳಿದ್ದಾಳೆ ಎಂಬ ನಂಬಿಕೆಯಿಂದ ಹಾವಿನೊಂದಿಗೆ ಜೀವನ ನಡೆಸುತ್ತಿದ್ದಾನೆ ಥಾಯ್ ಲ್ಯಾಂಡ್ ನ ವೊರ್ರಾನ್. ಯಾರು ಹೇಳಿದರೂ ಕೇಳದೇ ಬರೋಬ್ಬರಿ 10 ಅಡಿ ಉದ್ದದ ಕಾಳಿಂಗ ಸರ್ಪದ ಜೊತೆಗೆ ಊಟ, ನಿದ್ದೆ, ಆಟ, ಟಿ.ವಿ. ನೋಡುವುದನ್ನು ಮಾಡುತ್ತಾನೆ. ತನ್ನ ಜೊತೆಗೇ ಹಾವನ್ನು ಕರೆದುಕೊಂಡು ಓಡಾಡುತ್ತಾನೆ. ಮಾತ್ರವಲ್ಲ, ಅದನ್ನು ಮದುವೆಯಾಗಿ ಅದರೊಂದಿಗೇ ಸಿಂಗಾಪೂರಕ್ಕೆ ಹೋಗಿ ಹನಿಮೂನ್ ಮುಗಿಸಿಕೊಂಡು ಬಂದಿದ್ದಾನೆ.

ವೊರ್ರಾನ್ ಕಾಳಿಂಗ ಸರ್ಪದ ಜೊತೆಗೆ ಸಂಸಾರ ಮಾಡುವುದನ್ನು ಕಂಡವರು ಆತನಿಂದ ದೂರವಾಗಿದ್ದು, ಈ ಬಗ್ಗೆ ಆತ ತಲೆಕೆಡಿಸಿಕೊಂಡಿಲ್ಲ. ಪ್ರಿಯತಮೆ ಹಾವಿನ ರೂಪದಲ್ಲಿದ್ದಾಳೆ ಎಂಬ ನಂಬಿಕೆ ಆತನದ್ದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...