alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಡೆಲ್ ಸಹಾಯ ಪಡೆದ ಕಾಫಿ ಶಾಪ್ ಮಾಲೀಕ…!

ಥೈಲ್ಯಾಂಡ್ ಕಾಫಿ ಶಾಪ್ ಮಾಲೀಕರೊಬ್ಬರು ಬ್ಯುಸಿನೆಸ್ ಹೆಚ್ಚಿಸಲು ಮಾಡೆಲ್ ಸಹಾಯ ಪಡೆದಿದ್ದು, ದುಬಾರಿಯಾಗಿ ಪರಿಣಮಿಸಿದೆ. ಕಾಫಿ ಶಾಪ್ ಮಾಲೀಕ ಉತ್ತೇಜಕ ಮಾಡೆಲ್ ಫೋಟೋ ಹಾಗೂ ವಿಡಿಯೋವನ್ನು ಕಾಫಿ ಶಾಪ್ ಪ್ರಚಾರಕ್ಕೆ ಬಳಸಿದ್ದಾನೆ. ಇದು ಮಾಲೀಕ ಜೈಲು ಸೇರುವಂತೆ ಮಾಡಿದೆ.

ಥೈಲ್ಯಾಂಡ್ ನ ಪೊಲೀಸರು ಮೂರು ಕಾಫಿಶಾಪ್ ಮಾಲೀಕರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಮಾಲೀಕ ಪ್ರಾಸೊಂಗ್, ಮಾಡೆಲನ್ನು ವೇಟರ್ ರೂಪದಲ್ಲಿ ತೋರಿಸಿದ್ದಾನೆ. ಆಕೆ ಕೇವಲ ಏಪ್ರಾನ್ ಮಾತ್ರ ಧರಿಸಿ ಫೋಟೋಕ್ಕೆ ಫೋಸ್ ಕೊಟ್ಟಿದ್ದಾಳೆ. ಇದೇ ಮಾಲೀಕನಿಗೆ ದುಬಾರಿಯಾಗಿ ಪರಿಣಮಿಸಿದೆ.

ಥೈಲ್ಯಾಂಡ್ ನ ಕಂಪ್ಯೂಟರ್ ಕಾಯ್ದೆ ದುರುಪಯೋಗ ಮಾಡಿಕೊಳ್ಳಲಾಗಿದ್ದು, ವಿಡಿಯೋವನ್ನು ಆನ್ಲೈನ್ ಗೆ ಹಾಕಲಾಗಿದೆ. ಈ ಅಪರಾಧಕ್ಕೆ 5 ವರ್ಷ ಜೈಲುಶಿಕ್ಷೆಯಾಗುವ ಸಾಧ್ಯತೆಯಿದೆ. 1.80 ಲಕ್ಷ ರೂಪಾಯಿ ದಂಡ ವಿಧಿಸುವ ಸಾಧ್ಯತೆಯಿದೆ. ಮಾಡೆಲ್ ಫೋಟೋ ಹಾಗೂ ವಿಡಿಯೋವನ್ನು ಫೆಬ್ರವರಿ 3ರಂದು ಅಪ್ಲೋಡ್ ಮಾಡಲಾಗಿತ್ತು. ಫೋಟೋ ಅಪ್ಲೋಡ್ ಆಗಿ ಎರಡು ಗಂಟೆಯೊಳಗೆ 3500 ಕಮೆಂಟ್ಸ್ ಹಾಗೂ 21,000 ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಉಚಿತವಾಗಿ ಕಾಫಿ ನೀಡಿದ್ರೆ ಈ ಕೆಲಸ ಮಾಡೋದಾಗಿ ಮಾಡೆಲ್ ಒಪ್ಪಿಕೊಂಡಿದ್ದಳು ಎನ್ನಲಾಗಿದೆ. ಫೋಟೋ ಹಾಗೂ ವಿಡಿಯೋ ಜಾಹೀರಾತಿಗಾಗಿ ಮಾಡೆಲ್ ಹಣ ತೆಗೆದುಕೊಂಡಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...