alex Certify
ಕನ್ನಡ ದುನಿಯಾ       Mobile App
       

Kannada Duniya

ಥಾಯ್ ಬಾಲಕರ ರಕ್ಷಣಾ ತಂಡದಲ್ಲಿದ್ರು ಭಾರತೀಯರು…!

ದುರ್ಗಮ ಗುಹೆಯಿಂದ ಫುಟ್ಬಾಲ್ ಕೋಚ್ ಮತ್ತು 12 ಬಾಲಕರ ರಕ್ಷಣಾ ಕಾರ್ಯ ಯಶಸ್ವಿಯಾಗಿ ಮುಗಿದಿದೆ. ಗುಹೆಯಲ್ಲಿ ಸಿಲುಕಿದ್ದ ಎಲ್ಲರ ಪ್ರಾಣ ಕಾಪಾಡಿದ ರಕ್ಷಣಾ ತಂಡದ ಕಾರ್ಯವೀಗ ಜಗತ್ತಿನಾದ್ಯಂತ ಭಾರೀ ಪ್ರಶಂಸೆಗೆ ಒಳಗಾಗುತ್ತಿದೆ. ಈ ರಕ್ಷಣಾ ತಂಡದಲ್ಲಿ ಇಬ್ಬರು ಭಾರತೀಯರು ಇದ್ದರು ಅನ್ನೋ ವಿಚಾರ ಈಗ ನಮ್ಮೆಲ್ಲರ ಖುಷಿ ಹೆಚ್ಚಿಸಿದೆ.

ಮಹಾರಾಷ್ಟ್ರದ ಪ್ರಸಾದ್ ಕುಲಕರ್ಣಿ ಮತ್ತು ಪುಣೆಯ ಶ್ಯಾಮ್ ಶುಕ್ಲಾ ಬಾಲಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಮೇಜರ್ ರೋಲ್ ಪ್ಲೇ ಮಾಡಿದ್ದಾರೆ. ಈ ಇಬ್ಬರು ಎಂಜಿನಿಯರ್ಸ್ ಗುಹೆಯಲ್ಲಿ ತುಂಬಿದ್ದ ಅಪಾರ ಪ್ರಮಾಣದ ನೀರನ್ನು ಹೊರಹಾಕುವಲ್ಲಿ ರಕ್ಷಣಾ ತಂಡಕ್ಕೆ ನೆರವಾಗಿದ್ದಾರೆ.

ಏಳು ಮಂದಿ ಎಂಜಿನಿಯರ್ಸ್ ಗಳ ತಂಡದಲ್ಲಿ ಕಾರ್ಯ ನಿರ್ವಹಿಸಿದ್ದವರ ಪೈಕಿ ಇಬ್ಬರು ಭಾರತೀಯರು ಇದ್ದರು ಅನ್ನೋದೇ ವಿಶೇಷ. ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇವರು ಜುಲೈ 5ರಂದು ಗುಹೆಯಿಂದ ನೀರನ್ನು ಹೊರಹಾಕುವ ಕೆಲಸದಲ್ಲಿ ರಕ್ಷಣಾ ತಂಡಕ್ಕೆ ನೆರವಾಗಿದ್ದರು. ನಾಲ್ಕು ಕಿಲೋಮೀಟರ್ ವಿಸ್ತಾರವಾಗಿ ತುಂಬಿದ್ದ ನೀರನ್ನು ಹೊರಹಾಕುವಲ್ಲಿ ಈ ತಂಡ ಪಟ್ಟ ಶ್ರಮ ಅಷ್ಟಿಷ್ಟಲ್ಲವಂತೆ.

ಹವಾಮಾನ ವೈಪರೀತ್ಯ ಮತ್ತು ಕಡಿಮೆ ವಿದ್ಯುತ್ ಸರಬರಾಜಿನ ನಡುವೆ ಕೆಲಸ ಮಾಡೋದು ತುಂಬಾ ಸವಾಲಿನಿಂದ ಕೂಡಿತ್ತು ಅಂತಾರೆ ಶ್ಯಾಮ್ ಶುಕ್ಲಾ ಮತ್ತು ಪ್ರಸಾದ್ ಕುಲಕರ್ಣಿ. ವಿಶ್ವವೇ ಹಾಡಿ ಹೊಗಳುತ್ತಿರುರ ರಕ್ಷಣಾ ತಂಡದ ಕಾರ್ಯವೈಖರಿಗೆ ಅದರಲ್ಲೂ ಭಾರತೀಯರ ಈ ಕಾರ್ಯಕ್ಕೆ ನಾವು ಕೂಡ ಕಂಗ್ರ್ಯಾಟ್ಸ್ ಹೇಳಲೇಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...