alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಮಾಡ್ತಿದ್ದ ಮಹಿಳೆಗೆ ಕಾದಿತ್ತು ಶಾಕ್..!

ಹಾರ್ವೆ ಚಂಡಮಾರುತದ ಅಬ್ಬರಕ್ಕೆ ಅಮೆರಿಕದ ಟೆಕ್ಸಾಸ್ ನಗರ ಸಂಪೂರ್ಣ ತತ್ತರಿಸಿ ಹೋಗಿದೆ. ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗಿವೆ. ಮನೆ, ಕಚೇರಿ, ಶಾಲಾ-ಕಾಲೇಜಿಗಳಿಗೂ ನೀರು ನುಗ್ಗಿದೆ. ಅಪಾಯಕಾರಿ ಹಾವುಗಳು ಕೂಡ ನೀರಿನಲ್ಲಿ ತೇಲಿ ಬರ್ತಿವೆ.

ಟೆಕ್ಸಾಸ್ ನ ಮಹಿಳೆಯೊಬ್ಬಳಿಗೆ ಇಂಥದ್ದೇ ಭಯಾನಕ ಅನುಭವವಾಗಿದೆ. ಆಕೆಯ ಮನೆಗೂ ನೀರು ನುಗ್ಗಿತ್ತು. ಅಂಗಳ ಪೂರ್ತಿಯಾಗಿ ಜಲಾವೃತವಾಗಿತ್ತು. ತನ್ನ ಮನೆಯ ಹಿಂಭಾಗದಲ್ಲಿರೋ ಹಿತ್ತಲ ದೃಶ್ಯವನ್ನೆಲ್ಲ ಆಕೆ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ಲು.

ಆಗ ಪ್ರವಾಹದ ನೀರಿನಲ್ಲಿ ಈಜ್ತಾ ಇದ್ದ ಎರಡು ದೈತ್ಯ ಮೊಸಳೆಗಳು ಮಹಿಳೆ ಕಣ್ಣಿಗೆ ಬಿದ್ದಿವೆ. ಆಗಸ್ಟ್ 27ರಂದು ಆರ್ಲೆನೆ ಕೆಲ್ಷ್ ಎಂಬ ಮಹಿಳೆ ರೆಕಾರ್ಡ್ ಮಾಡಿರೋ ಈ ವಿಡಿಯೋ ವೈರಲ್ ಆಗಿದೆ. ಇನ್ನೊಂದೆಡೆ ಮೊಸಳೆಗಳು ಮನೆಯ ಹೊರಭಾಗದಲ್ಲೇ ಬಂದು ಮಲಗಿರೋ ಫೋಟೋಗಳನ್ನು ಕೂಡ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...