alex Certify
ಕನ್ನಡ ದುನಿಯಾ       Mobile App
       

Kannada Duniya

17 ವರ್ಷಗಳಿಂದ ಇದೇ ಮೊಬೈಲ್ ಬಳಸ್ತಿದ್ದಾನೆ ಈತ..!

nokia

ಹಳೆಯ ನೋಕಿಯಾ 3310 ಹ್ಯಾಂಡ್ ಸೆಟ್ ಗ್ರಾಹಕರ ಅತ್ಯಂತ ನೆಚ್ಚಿನ ಮೊಬೈಲ್ ಆಗಿತ್ತು. ಈಗ ಅದನ್ನು ಮತ್ತೆ ಮಾರುಕಟ್ಟೆಗೆ ತರಲು ನೋಕಿಯಾ ಕಂಪನಿ ಮುಂದಾಗಿದೆ. ಬ್ರಿಟನ್ ನಲ್ಲೊಬ್ರು ಕಳೆದ 17 ವರ್ಷಗಳಿಂದ ನೋಕಿಯಾ 3310 ಮೊಬೈಲ್ ಬಳಸ್ತಿದ್ದಾರೆ. 49 ವರ್ಷದ ಡೇವ್ ಮಿಚೆಲ್ ನೋಕಿಯಾ 3310 ಮೊಬೈಲ್ ಅನ್ನು 2000ನೇ ಇಸ್ವಿಯಲ್ಲಿ ಖರೀದಿಸಿದ್ರು.

nok

ಇವತ್ತಿನವರೆಗೂ ಡೇವ್ ಅದೇ ಮೊಬೈಲ್ ಬಳಸ್ತಿದ್ದಾರೆ. ಸ್ಮಾರ್ಟ್ ಫೋನ್ ಗಳಂತೆ ಹ್ಯಾಂಗ್ ಆಗೋದಾಗ್ಲಿ, ಬ್ಯಾಟರಿ ಸಮಸ್ಯೆಯಾಗ್ಲಿ ಅವರಿಗಿಲ್ಲ. ಇದುವರೆಗೆಗೂ ಡೇವ್ ಅವರ ನೋಕಿಯಾ 3310 ಮೊಬೈಲ್ ನಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ. ಎರಡು ವಾರಕ್ಕೊಮ್ಮೆ ಅವರು ಮೊಬೈಲ್ ಚಾರ್ಜ್ ಮಾಡ್ತಾರಂತೆ.

ಟೆಕ್ನಾಲಜಿ ಇಷ್ಟು ಮುಂದುವರಿದಿದ್ರೂ ಈಗಲೂ ನೋಕಿಯಾ 3310 ಬೇಸಿಕ್ ಮಾಡೆಲ್ ಹ್ಯಾಂಡ್ಸೆಟ್ ಇಟ್ಕೊಂಡಿರೋ ಡೇವ್ ಅವರಿಗೆ ಸ್ನೇಹಿತರೆಲ್ಲ ಹಾಸ್ಯ ಮಾಡ್ತಾರೆ. ಮಗನಿಗೆ ಡೇವ್, ಸ್ಮಾರ್ಟ್ ಫೋನ್ ಕೊಡಿಸಿದ್ದಾರೆ, ಆದ್ರೆ ಅವರು ಮಾತ್ರ ನೋಕಿಯಾ 3310 ಫೋನನ್ನೇ ಬಳಸ್ತಿದ್ದಾರೆ. ಬೇಜಾರಾದಾಗ ಅದರಲ್ಲಿರೋ ಸ್ನೇಕ್ ಗೇಮ್ ಆಡ್ತಾರಂತೆ. ಇದು ಬ್ರಿಟನ್ ನಲ್ಲಿರೋ ಅತ್ಯಂತ ಹಳೆಯ ಮೊಬೈಲ್ ಅನ್ನೋದು ಡೇವ್ ಅನಿಸಿಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...