alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯವರ ಕಣ್ಣೆದುರಲ್ಲೇ ನಡೀತು ಭಯಾನಕ ಘಟನೆ

snake_eat_dog

ಬ್ಯಾಂಕಾಕ್: ಇತ್ತೀಚೆಗಷ್ಟೆ ಮಂಗಳೂರಿನಲ್ಲಿ 11 ವರ್ಷದ ಬಾಲಕನೊಬ್ಬ ಹೆಬ್ಬಾವಿನ ಹಿಡಿತಕ್ಕೆ ಸಿಲುಕಿದ್ದು, ಆತ ತೋರಿದ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಪಾರಾಗಿ ಬಂದಿದ್ದ ಘಟನೆ ವರದಿಯಾಗಿತ್ತು.

ಹೆಬ್ಬಾವಿನ ಹಿಡಿತಕ್ಕೆ ಸಿಕ್ಕರೆ ಕತೆ ಮುಗಿದೇ ಹೋಯ್ತು. ಸಾಮಾನ್ಯವಾಗಿ ತಪ್ಪಿಸಿಕೊಳ್ಳಲು ಚಾನ್ಸೇ ಸಿಗಲ್ಲ. ಹೀಗೆ ಹೆಬ್ಬಾವಿನ ಹಿಡಿತಕ್ಕೆ ಸಿಲುಕಿ ಸಾಕು ನಾಯಿಯೊಂದು ಮಾಲೀಕರ ಕಣ್ಣೆದುರಲ್ಲೇ ಜೀವ ಕಳೆದುಕೊಂಡ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ. ಫಥಮ್ ಥಾನಿ ಏರಿಯಾ ನಿವಾಸಿ ಕ್ಲೋಮ್ ಫಾನ್ ಕೀವಾನ್ ಅವರ ಮನೆಯಲ್ಲಿ ಫಿನೋ ಹೆಸರಿನ ನಾಯಿ ಸಾಕಲಾಗಿತ್ತು.

ಬೆಳಗಿನ ಜಾವ ನಾಯಿ ಕೂಗಿದ ಸದ್ದು ಕೇಳಿದ ಮನೆಯವರು ಹೊರಗೆ ಬಂದಿದ್ದು, ಈ ಸಂದರ್ಭದಲ್ಲಿ ಭಯಾನಕ ದೃಶ್ಯ ಕಣ್ಣಿಗೆ ಬಿದ್ದಿದೆ.

ಬೃಹತ್ ಹೆಬ್ಬಾವೊಂದು ನಾಯಿಯನ್ನು ನುಂಗುತ್ತಿರುವುದು ಕಂಡಿದೆ. ಕೂಡಲೇ ಹಾವು ಹಿಡಿಯುವ ಪರಿಣಿತರಿಗೆ ಕರೆ ಮಾಡಲಾಗಿದ್ದು, ಅವರು ಬರುವಷ್ಟರಲ್ಲಿ ನಾಯಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕೊನೆಗೆ ನಾಯಿಯ ದೇಹ ಹೊರಗೆಳೆದು, ಹಾವನ್ನು ಸಮೀಪದ ಕಾಡಿಗೆ ಬಿಡಲಾಗಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...