alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚಲ್ಲಿ ನೀರು ತರಿಸ್ತಾಳೆ ಈ ಮದುಮಗಳು

madu-maglu

ಈ ಮದುವೆಯನ್ನು ನೋಡಿದ್ರೇ ವಿಧಿಯನ್ನು ಶಪಿಸದೇ ಇರಲಾರಿರಿ. ಅಷ್ಟಕ್ಕೂ ಇದು ಮದುವೆಯಲ್ಲ, ಬಾಲ್ಯ ವಿವಾಹ. ಬಾಲ್ಯ ವಿವಾಹ ಅಪರಾಧವಾಗಿದ್ದರೂ, ಈ ಬಾಲಕಿಗೆ ಅದು ಅನ್ವಯಿಸಿಲ್ಲ. ಕಾರಣ ಆಕೆ ಸಾವಿನಂಚಿನಲ್ಲಿದ್ದಾಳೆ.

ಸ್ಕಾಟ್ ಲ್ಯಾಂಡ್ ನಲ್ಲಿ ನಡೆದ ಈ ಬಾಲ್ಯ ವಿವಾಹಕ್ಕೆ ಕಾನೂನು ಕೂಡ ಸಮ್ಮತಿಸಿದೆ. ಅಷ್ಟಕ್ಕೂ ಏನಿದು ಘಟನೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಬಾಲಕಿ ಈಲಿದ್ ಪೆಟರ್ಸನ್(5) ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಆಕೆಯ ಕೊನೆಯ ಆಸೆಯಂತೆ ಗೆಳೆಯ 6 ವರ್ಷದ ಹ್ಯಾರಿಸನ್ ಗ್ರೇರ್ ಜೊತೆ ವಿವಾಹ ನೆರವೇರಿದೆ.

ಈಲಿದ್ ಮದುವೆಯಾಗಬೇಕೆಂಬ ಆಸೆಯನ್ನು ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಪೋಷಕರು ಗ್ರೇರ್ ಪೋಷಕರ ಜೊತೆ ಮಾತನಾಡಿದ್ದು, ಎಲ್ಲರೂ ಒಪ್ಪಿ ಮಕ್ಕಳ ಮದುವೆಯನ್ನು ಮಾಡಿದ್ದಾರೆ.

ಬಂಧು, ಬಾಂಧವರ ಸಮ್ಮುಖದಲ್ಲಿ ಮದುವೆ ನಡೆದಿದ್ದು, ಮದುಮಕ್ಕಳು ಹೊಸ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಗಂಗ್ನಮ್ ಹಾಡಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ.

ಎಂದೂ ಎಲ್ಲಿಯೂ ಹೋಗದ ನನ್ನ ಮಗ ಬಾಲಕಿಯ ಕನಸಿನಂತೆ ಆಕೆಯ ಮದುವೆಯಲ್ಲಿ ಪಾಲ್ಗೊಂಡಿದ್ದು ಖುಷಿಯಾಗಿದೆ ಎಂದು ಗ್ರೇರ್ ತಂದೆ ಬಿಲಿ ಗ್ರೇರ್ ಹೇಳಿದ್ದಾರೆ. ಈ ಮದುವೆಗೆ ಬಂದವರೆಲ್ಲಾ ಬಾಲಕಿಯನ್ನು ಬಲಿ ಪಡೆಯಲು ಕಾಯುತ್ತಿರುವ ವಿಧಿಯನ್ನು ಶಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...