alex Certify
ಕನ್ನಡ ದುನಿಯಾ       Mobile App
       

Kannada Duniya

ಬೇರೆಯಾಗಿದ್ದ ರುಂಡ 130 ವರ್ಷದ ನಂತರ ಸೇರಿತು !

-statue-channa-

ನಾಂಪೆನ್: ಕಾಂಬೋಡಿಯಾದ ನಾಂಪೆನ್ ಪ್ರಾಚೀನ ವಸ್ತುಸಂಗ್ರಹಾಲಯದಲ್ಲಿ ರುಂಡವಿಲ್ಲದ ಹರಿಹರನ ಮೂರ್ತಿಯನ್ನು ಇಷ್ಟುದಿನ ನೋಡುತ್ತಿದ್ದ ಮಂದಿಗೆ ಒಮ್ಮೆಲೆ ಆಶ್ಚರ್ಯ ಕಾದಿತ್ತು. ಹರಿಹರ ಮೂರ್ತಿಗೆ ತಲೆ ಬಂದಿತ್ತು. ಇಲ್ಲಿನ ಜನರಿಗೆ ಇದೇನಿರಬಹುದೆಂಬ ಕುತೂಹಲ ಸಹಜವಾಗಿಯೇ ಮೂಡಿತ್ತು.

ಕಾಂಬೋಡಿಯಾದ ನೋಮ್ ದಾ ದೇವಾಲಯದಿಂದ 1882-83 ರ ಸುಮಾರಿನಲ್ಲಿ ಫ್ರಾನ್ಸ್ ಸಂಶೋಧಕರು ಈ ದೇವರ ಮೂರ್ತಿಯ ರುಂಡವನ್ನು ತೆಗೆದುಕೊಂಡು ಹೋಗಿದ್ದರು. ಫ್ರಾನ್ಸ್ ನ ಗ್ಯಮೆಟ್ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಹರಿಹರನ ತಲೆಯ ಭಾಗವನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಕಾಂಬೋಡಿಯಾದಲ್ಲಿ ದೇಹದ ಭಾಗವನ್ನು ಮಾತ್ರ ವೀಕ್ಷಣೆ ಮಾಡುವಂತಾಗಿತ್ತು. ಇದೀಗ ಬರೋಬ್ಬರಿ 130 ವರ್ಷಗಳ ಬಳಿಕ ಕಾಂಬೋಡಿಯಾಕ್ಕೆ ದೇವರ ತಲೆಯನ್ನು ಫ್ರಾನ್ಸ್ ಹಸ್ತಾಂತರಿಸಿದೆ.

ಎರಡೂ ದೇಶದ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆದು ಕಾಂಬೋಡಿಯಾದ ನಾಂಪೆನ್ ಮ್ಯೂಸಿಯಂನಲ್ಲಿ ಇದ್ದ ದೇಹಕ್ಕೆ ತಲೆಯನ್ನು ಜೋಡಿಸಲಾಗಿದೆ. ಕಾಂಬೋಡಿಯಾದಿಂದ ತೆಗೆದುಕೊಂಡು ಹೋಗಿದ್ದ ಹರಿಹರನ ತಲೆ ಮತ್ತೆ ಸೇರಿರುವುದಕ್ಕೆ ಕಾಂಬೋಡಿಯಾ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...