alex Certify
ಕನ್ನಡ ದುನಿಯಾ       Mobile App
       

Kannada Duniya

ಛತ್ರಿಯೊಂದಿಗೆ ಕಳ್ಳನ ಜೊತೆ ಸೆಣಸಾಡಿ ಗೆದ್ದ ಯುವಕ

umbrellaಯುವಕನೊಬ್ಬ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ನುಗ್ಗಿದ ಚಾಕು ಹಿಡಿದ ಕಳ್ಳನೊಬ್ಬ ಯುವಕನ ಕೈಕಾಲು ಕಟ್ಟಿ ಮನೆ ದೋಚಲು ಮುಂದಾದ ವೇಳೆ ಧೈರ್ಯ ತೋರಿದ ಯುವಕ ಆತನ ಮೇಲೆ ಮುಗಿಬಿದ್ದು, ಕಳ್ಳನನ್ನು ಅಟ್ಟಿಸಿಕೊಂಡು ಹೋದ ಘಟನೆ ಉತ್ತರ ಲಂಡನ್ ನಲ್ಲಿ ನಡೆದಿದೆ.

ಜಾರ್ಜ್ ಜೆಲೋಂಕಾ ಎಂಬ 19 ವರ್ಷದ ಯುವಕ ಹ್ಯಾಂಪ್ಸ್ಟಡ್ ನ ತನ್ನ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಮುಸುಕುಧಾರಿ ಕಳ್ಳನೊಬ್ಬ ಕೈಯಲ್ಲಿ ಉದ್ದನೆಯ ಚಾಕು ಹಿಡಿದು ಒಳ ನುಗಿದ್ದಾನೆ. ಜಾರ್ಜ್ ನ ಕುತ್ತಿಗೆಗೆ ಚಾಕು ಹಿಡಿದ ಆತ ಕೈಕಾಲು ಕಟ್ಟಲು ಮುಂದಾಗಿದ್ದಾನೆ. ಜೊತೆಗೆ ಅಲ್ಲಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡಾ ಹಾಕಿದ್ದಾನೆ.

ಆದರೆ ಇದರಿಂದ ಧೈರ್ಯಗುಂದದ ಯುವಕ ಆತನ ವಿರುದ್ದ ತಿರುಗಿ ಬಿದ್ದಿದ್ದು, ಕೈಗೆ ಸಿಕ್ಕ ಛತ್ರಿಯಿಂದ ಯದ್ವಾತದ್ವಾ ಬಾರಿಸಿದ್ದಾನೆ. ಈ ಹೊಡೆತ ತಾಳಲಾರದ ಕಳ್ಳ ಅಲ್ಲಿಂದ ಓಡಿ ಹೋಗಿದ್ದು, ಕೊಂಚ ದೂರ ಯುವಕ ಕಳ್ಳನನ್ನು ಅಟ್ಟಿಸಿಕೊಂಡು ಹೋಗಿದ್ದಾನೆ. ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಯುವಕನ ಧೈರ್ಯವನ್ನು ಶ್ಲಾಘಿಸಿರುವ ಪೊಲೀಸರು ಕಳ್ಳನ ಪತ್ತೆಗೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...