alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತಂತೆ ನಟಿಸಿದ್ದಕ್ಕೆ ಬದುಕುಳಿದಳಾಕೆ

Teen stabbed 100 times by boyfriend, survives attack by playing deadಕುಡಿಯಲು ಒಂದು ಲೋಟ ನೀರು ಕೇಳಿದ ವೇಳೆ ತನ್ನ ಪ್ರಿಯತಮೆ ತಂದು ಕೊಡಲು ನಿರಾಕರಿಸಿದಳೆಂಬ ಕಾರಣಕ್ಕೆ ಯುವಕನೊಬ್ಬ ಭೀಕರ ಕೃತ್ಯವೆಸಗಿದ್ದಾನೆ. ಆಕೆಯ ಎರಡು ವರ್ಷದ ಪುತ್ರನ ಮುಂದೆಯೇ 100 ಕ್ಕೂ ಅಧಿಕ ಬಾರಿ ಚೂರಿಯಿಂದ ಇರಿದಿದ್ದಾನೆ.

ಘಟನೆ ನಡೆದಿರುವುದು ಇಂಗ್ಲೆಂಡ್ ನಲ್ಲಿ. 19 ವರ್ಷದ ಯುವಕ ತನ್ನ ಪ್ರಿಯತಮೆಯ ಮನೆಗೆ ತೆರಳಿದ್ದ ವೇಳೆ ನೀರು ತಂದು ಕೊಡಲು ಕೇಳಿದ್ದಾನೆ. ಮಗುವನ್ನು ಆಡಿಸುತ್ತಿದ್ದ ಆಕೆ ಅದಕ್ಕೆ ನಿರಾಕರಿಸಿದ್ದಾಳೆ. ಅಷ್ಟಕ್ಕೆ ರೊಚ್ಚಿಗೆದ್ದ ಆತ ಮನಬಂದಂತೆ ಆಕೆಗೆ ಚೂರಿಯಿಂದ ಇರಿದಿದ್ದಾನೆ.

ಬಳಿಕ ಆಕೆ ಸತ್ತಂತೆ ನಟಿಸಿದ್ದು, ಇದನ್ನು ಕಂಡ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ತೆವಳಿಕೊಂಡೇ ಮನೆಯಿಂದ ಹೊರ ಬಂದ ಮಹಿಳೆ, ಬಸ್ ಚಾಲಕನೊಬ್ಬನ ಸಹಾಯದಿಂದ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾಳೆ. ತಕ್ಷಣವೇ ಧಾವಿಸಿ ಬಂದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಣ್ಣೆದುರು ನಡೆದ ಘಟನೆಯಿಂದ ಆಕೆಯ ಮಗು ಶಾಕ್ ಗೊಳಗಾಗಿದೆ. ಇದೀಗ ಕೃತ್ಯವೆಸಗಿದ್ದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...