alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾಲಕ ಮಾಡಿರುವ ಚಮತ್ಕಾರ ನೋಡಿದ್ರೆ ಬೆರಗಾಗ್ತೀರಿ

ಒಂದೇ ಒಂದು ರುಬಿಕ್ ಕ್ಯೂಬ್‍ನಲ್ಲಿ ಚಮತ್ಕಾರ ತೋರಲು ಅನೇಕರು ಪರದಾಡುವುದುಂಟು. ಅಂಥದ್ದರಲ್ಲಿ ಎರಡೆರಡು ರುಬಿಕ್ ಕ್ಯೂಬ್‍ನಲ್ಲಿ ಚಮತ್ಕಾರ ಮೆರೆದರೆ ಸಾಹಸವೇ ಸರಿ. ಆದರೆ ಇಲ್ಲೊಬ್ಬ ಬಾಲಕ ಅದಕ್ಕೂ ಮೀರಿದ ಸಾಹಸ ಮಾಡಿ ಗಿನ್ನೆಸ್ ರೆಕಾರ್ಡ್ ಮಾಡಿದ್ದಾನೆ.

ಅಂದಹಾಗೆ ಆತ ಏಕಕಾಲದಲ್ಲಿ ಮೂರು ರುಬಿಕ್ ಕ್ಯೂಬ್‍ ನಲ್ಲಿ ಚಮತ್ಕಾರ ತೋರಿ ದಾಖಲೆ ಮೆರೆದಿದ್ದಾನೆ. ಅದು ಹೇಗೆ ಮೂರನ್ನು ಏಕಕಾಲದಲ್ಲಿ ಮಾಡುತ್ತಾನೆ ಎಂದು ಅಚ್ಚರಿಯಾಗಬೇಡಿ. ಏಕೆಂದರೆ ತನ್ನ ಕೈಗಳಿಂದ ತಲಾ ಒಂದೊಂದು ಕ್ಯೂಬ್ ಹಾಗೂ ಎರಡು ಕಾಲುಗಳಲ್ಲಿ ಒಂದು ಕ್ಯೂಬ್‍ ಅನ್ನು ಹಿಡಿದು ಅವನು ಚಮತ್ಕಾರ ತೋರಿದ್ದಾನೆ.

ಚೀನಾದ ಕ್ಸಿಯಾಮೆನ್‍ನ ಕ್ಯೂ ಜಿಯಾನ್ಯು ಎಂಬ 13 ವರ್ಷದ ಬಾಲಕನೇ ಈ ಸಾಹಸಿ. ಅದರಲ್ಲೂ ಈ ಸಾಹಸಕ್ಕೆ ಆತ ತೆಗೆದುಕೊಂಡ ಸಮಯ ಕೇವಲ 1 ನಿಮಿಷ 36.39 ಸೆಕೆಂಡುಗಳು. ಇನ್ನು ತಲೆಕೆಳಗಾಗಿ ನೇತಾಡುತ್ತ 15.84 ಸೆಕೆಂಡುಗಳಲ್ಲಿ ರುಬಿಕ್ ಕ್ಯೂಬ್‍ ನಲ್ಲಿ ಚಮತ್ಕಾರಿ ತೋರಿ ಆತ ಮತ್ತೊಂದು ದಾಖಲೆಯನ್ನೂ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...