alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಸ್ವಯಂಸೇವಕರಿಂದ್ಲೇ ವಾಹನ ಕಳವು

police

ಲಾಸ್ ಎಂಜಲೀಸ್ ನಲ್ಲಿ ಮೂವರು ವಿದ್ಯಾರ್ಥಿಗಳು ಪೊಲೀಸ್ ಇಲಾಖೆಗೆ ಸೇರಿದ ವಾಹನವನ್ನು ಕದ್ದು, ಗಸ್ತು ತಿರುಗಿದ್ದಾರೆ. ಅಷ್ಟೇ ಅಲ್ಲ ಅಪಘಾತವನ್ನೂ ಮಾಡಿದ್ದಾರೆ. 15,16 ಮತ್ತು 17 ವರ್ಷ ವಯಸ್ಸಿನ ಇಬ್ಬರು ಬಾಲಕರು ಮತ್ತು ಓರ್ವ ಬಾಲಕಿ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ.

ಸೌತ್ ಲಾಸ್ ಎಂಜಲೀಸ್ ನಲ್ಲಿ ಎರಡು ವಾಹನಗಳು ಅಪಘಾತಕ್ಕೀಡಾಗಿದ್ವು, ಇನ್ನೊಂದು ಕಾರು ಪೊಲೀಸ್ ಸ್ಟೇಶನ್ ಒಂದರ ಬಳಿ ಸಿಕ್ಕಿದೆ. ಪೊಲೀಸ್ ಇಲಾಖೆಯ ಕೆಡೆಟ್ ಪ್ರೋಗ್ರಾಮ್ ನಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಈ ಕೃತ್ಯ ನಡೆಸಿದ್ದಾರೆ.

ಕ್ರಿಮಿನಲ್ ಜುಡಿಶಿಯಲ್ ಸಿಸ್ಟಮ್ ಬಗ್ಗೆ ಕಲಿಯಲೆಂದೇ ಇವರು ಸ್ವಯಂಸೇವಕರಾಗಿ ಅಕಾಡೆಮಿ ಸೇರಿದ್ದರು. ಕಳ್ಳ ಕಾರು ಖದೀಮರನ್ನು ಹಿಡಿಯಲು ಇವರು ಪೊಲೀಸರಿಗೆ ನೆರವಾಗಬೇಕಿತ್ತು. ಆದ್ರೆ ಉಂಡ ಮನೆಗೆ ಎರಡು ಬಗೆದ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆಗೆ ಸೇರಿದ ವಾಹನಗಳನ್ನೇ ಗಾಯಬ್ ಮಾಡಿ ಈಗ ಸಿಕ್ಕಿಬಿದ್ದಿದ್ದಾರೆ.

ನಗರದ ತುಂಬಾ ವಾಹನ ಓಡಿಸ್ತಾ ಇದ್ದ ಹುಡುಗರು ಪೊಲೀಸರ ಕಣ್ಣಿಗೆ ಬೀಳ್ತಿದ್ದಂತೆ ತಪ್ಪಿಸಿಕೊಳ್ಳಲು ಹೋಗಿ ಅಪಘಾತ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಓರ್ವ ಮಹಿಳೆ ಗಾಯಗೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...