alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನಾನ ಮಾಡುವಾಗ ಮೊಬೈಲ್ ಬಳಸಿದ ವೇಳೆ ಆಗಿದ್ದೇನು?

madison-coe_650x400_71499823903

ಸ್ನಾನ ಮಾಡುವ ಸಂದರ್ಭದಲ್ಲಿ ಚಾರ್ಜ್ ಗೆ ಹಾಕಿದ್ದ ಮೊಬೈಲ್ ಸ್ಪರ್ಷಿಸಿ ಬಾಲಕಿ ಮೃತಪಟ್ಟಿದ್ದಾಳೆ. ಅಮೆರಿಕದ ಟೆಕ್ಸಾಸ್ ನಲ್ಲಿ ಈ ದುರಂತ ನಡೆದಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಯುವತಿಯ ಕುಟುಂಬ ಈ ಬಗ್ಗೆ ಮಾಹಿತಿ ನೀಡಿದೆ.

14 ವರ್ಷದ ಮ್ಯಾಡಿಸನ್ ಕೋ ಮೃತ ದುರ್ದೈವಿ. ನ್ಯೂ ಮೆಕ್ಸಿಕೋದಲ್ಲಿರೋ ಮನೆಯಲ್ಲಿ ಮ್ಯಾಡಿಸನ್ ಸ್ನಾನ ಮಾಡ್ತಾ ಇದ್ಲು. ಬಾತ್ ಟಬ್ ನಲ್ಲಿ ಕುಳಿತುಕೊಂಡೇ ಚಾರ್ಜ್ ಗೆ ಹಾಕಿದ್ದ ಮೊಬೈಲ್ ಆಪರೇಟ್ ಮಾಡಿದ್ದಾಳೆ. ಈ ವೇಳೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾಳೆ.

ಬಾಲಕಿ ಮೊಬೈಲ್ ಹಿಡಿದುಕೊಂಡಿದ್ದ ಜಾಗದಲ್ಲಿ ಕೈ ಮೇಲೆ ಸುಟ್ಟ ಗಾಯವಾಗಿತ್ತು. ಮೊಬೈಲ್ ಮತ್ತು ಚಾರ್ಜರ್ ಅಲ್ಲೇ ಬಿದ್ದುಕೊಂಡಿತ್ತು. ಈ ಘಟನೆಯನ್ನು ಮ್ಯಾಡಿಸನ್ ತಾಯಿ ಫೇಸ್ಬುಕ್ ನಲ್ಲಿ ವಿವರಿಸಿದ್ದಾಳೆ. ಮಗಳ ಫೋಟೋ ಪೋಸ್ಟ್ ಮಾಡಿದ್ದು, ಸ್ನಾನದ ಮನೆಯಲ್ಲಿ ಮೊಬೈಲ್ ಬಳಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...