alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನ ಸಮೀಪದಲ್ಲಿದ್ದಾಗ್ಲೇ ಮನೆಯವರಿಗೆ ಮೆಸೇಜ್ ಕಳಿಸಿದ್ದ ಬಾಲಕ

bear-1-650_650x400_41497325623

ಲಾಸ್ ಎಂಜಲೀಸ್ ನ ಅಲಾಸ್ಕಾದಲ್ಲಿ ನಡೆದ ರನ್ನಿಂಗ್ ರೇಸ್ ನಲ್ಲಿ 16 ವರ್ಷದ ಬಾಲಕನೊಬ್ಬ ಕರಡಿ ದಾಳಿಗೆ ಬಲಿಯಾಗಿದ್ದಾನೆ. ಕರಡಿ ದಾಳಿ ಮಾಡಿದ ಸಂದರ್ಭದಲ್ಲೇ ಆತ ತನ್ನ ಕುಟುಂಬದವರಿಗೆ ಮೊಬೈಲ್ ನಲ್ಲಿ ಮೆಸೇಜ್ ಕಳಿಸಿದ್ದ.

ಭಾನುವಾರ ನಡೆದ ಮೌಂಟೇನ್ ರೇಸ್ ನಲ್ಲಿ ಪ್ಯಾಟ್ರಿಕ್ ಕೂಪರ್ ಕೂಡ ಪಾಲ್ಗೊಂಡಿದ್ದ. ರೇಸ್ ನಲ್ಲಿ ಓಡುತ್ತಿದ್ದಾಗಲೇ ಕರಡಿಯೊಂದು ಅವನನ್ನು ಬೆನ್ನಟ್ಟಿ ಬಂದಿದೆ. ಈ ವೇಳೆ ತನ್ನ ಕುಟುಂಬದ ಸದಸ್ಯರೊಬ್ಬರಿಗೆ ಕರಡಿ ತನ್ನನ್ನು ಅಟ್ಟಿಸಿಕೊಂಡು ಬರ್ತಾ ಇದೆ ಅಂತಾ ಪ್ಯಾಟ್ರಿಕ್ ಮೆಸೇಜ್ ಕಳಿಸಿದ್ದಾನೆ. ಶಿಖರ ಏರಿದ್ದ ಪ್ಯಾಟ್ರಿಕ್, ಅಲ್ಲಿಂದ ಕೆಳಕ್ಕೆ ಇಳಿಯುತ್ತಿರುವಾಗ ಕರಡಿ ದಾಳಿ ಮಾಡಿದೆ.

ಸಹಸ್ಪರ್ಧಿಗಳು ಸ್ಥಳಕ್ಕೆ ಧಾವಿಸಿ ಬಂದರಾದ್ರೂ, ಕರಡಿ ಕೈಯಿಂದ ಬಾಲಕನನ್ನು ತಪ್ಪಿಸಲು ಸಾಧ್ಯವಾಗಲೇ ಇಲ್ಲ. ಸಮೀಪದಲ್ಲಿದ್ದ ಉದ್ಯಾನವವೊಂದರ ಸಿಬ್ಬಂದಿ ಗುಂಡು ಹಾರಿಸಿದ್ದ, ಆದ್ರೆ ಕರಡಿಗೆ ಗುಂಡು ತಗುಲಿಲ್ಲ. ಅದು ತಪ್ಪಿಸಿಕೊಂಡಿದ್ದು, ಅಲ್ಲೇ ಸುತ್ತಮುತ್ತಲ ಪ್ರದೇಶದಲ್ಲಿ ಓಡಾಡಿಕೊಂಡಿದೆ.

ಸುಮಾರು 500 ಮೀಟರ್ ದೂರದವರೆಗೂ ಕರಡಿ ಬಾಲಕನನ್ನು ಎಳೆದೊಯ್ದಿದೆ. ಕರಡಿ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಾಳಿ ಮಾಡಿದ ಕರಡಿ ನರಭಕ್ಷಕ ಅಂತಾ ಅಧಿಕಾರಿಗಳು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...