alex Certify
ಕನ್ನಡ ದುನಿಯಾ       Mobile App
       

Kannada Duniya

15 ರ ಬಾಲೆ ಮಾಡಿದ ಈ ಕೆಲಸಕ್ಕೆ ನೀವೂ ಹೇಳ್ತಿರಿ ಹ್ಯಾಟ್ಸಾಪ್

ಮಾನವೀಯತೆಗೆ ಭಾಷೆಯ ಅಗತ್ಯವಿಲ್ಲ ಅನ್ನೋದನ್ನ 15ರ ಈ ಬಾಲೆ ತೀರಾ ಸಿಂಪಲ್ ಆಗಿ ಇಡೀ ಜಗತ್ತಿಗೆ ಅರ್ಥ ಮಾಡಿಸಿದ್ದಾಳೆ. ಅದು ಹೇಗೆ ಗೊತ್ತಾ…?

ಬೋಸ್ಟನ್ನಿಂದ ಹೊರಟ ವಿಮಾನವೊಂದರಲ್ಲಿ ಮಿಸ್ಟರ್ ಕುಕ್ ಅನ್ನೋ ವ್ಯಕ್ತಿ ಪ್ರಯಾಣಿಸುತ್ತಿದ್ದರು ಕುಕ್ ಒಬ್ಬ ವಿಶೇಷ ಚೇತನ ವ್ಯಕ್ತಿ. ಕುರುಡರು ಮತ್ತು ಕಿವುಡರಾಗಿರೋ ಕುಕ್ ಅವರ ಮಾತುಗಳು ಸ್ಪಷ್ಟವಾಗಿರಲಿಲ್ಲ. ಸಾಂಕೇತಿಕ ಭಾಷೆಯ ಹೊರತಾಗಿ ಮತ್ತಾವುದೇ ಭಾಷೆಯನ್ನ ಅರ್ಥ ಮಾಡಿಕೊಳ್ಳೋದಕ್ಕೆ ಅವರಿಗೆ ಸಾಧ್ಯವಾಗ್ತಿರಲಿಲ್ಲ.

ಕುಕ್ ಅವರು ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಆದ್ರೆ ಅದು ಅವರಿಗೆ ಅರ್ಥವಾಗಲಿಲ್ಲ. ಕೊನೆಗೆ ವಿಮಾನದ ಸಿಬ್ಬಂದಿಗೂ ಕುಕ್ ಅವರಿಗೆ ಏನು ಬೇಕು ಅನ್ನೋದು ಅರ್ಥವಾಗಲಿಲ್ಲ. ಇನ್ನೇನು ಬೇರೆ ದಾರಿಯೇ ಇಲ್ಲ ಅನ್ನೋ ಸಂದರ್ಭದಲ್ಲಿ ವಿಮಾನದ ಸಿಬ್ಬಂದಿ ಪ್ರಯಾಣಿಕರ ಸಹಾಯ ಕೇಳಿದ್ರು. ಸಾಂಕೇತಿಕ ಭಾಷೆ ಬಲ್ಲವರು ಯಾರಾದ್ರು ಕುಕ್ ಅವರಿಗೆ ಸಹಾಯ ಮಾಡಿ ಅಂತ ಕೇಳಿಕೊಂಡರು.

ಆಗ ಕುಕ್ ಅವರ ನೆರವಿಗೆ ಬಂದಿದ್ದು 15 ರ ಬಾಲಕಿ ಕ್ಲಾರಾ ಡೆಲಿ. ಕುಕ್ ಬಳಿಗೆ ಬಂದ ಕ್ಲಾರಾ ಸಾಂಕೇತಿಕ ಭಾಷೆಯ ಮೂಲಕ ಕುಕ್ ನನ್ನ ಮಾತನಾಡಿಸೋಕೆ ಶುರುಮಾಡಿದಳು. ಮೊದಲು ಇದನ್ನು ನೋಡಿ ನಕ್ಕಂತ ಸಹ ಪ್ರಯಾಣಿಕರು ಆನಂತರದಲ್ಲಿ ಕ್ಲಾರಾಳ ಮುಗ್ಧ ಪ್ರೀತಿಯನ್ನ ಮೆಚ್ಚಿಕೊಂಡರು. ಕ್ಲಾರಾ ಮತ್ತು ಕುಕ್ ನಡುವಿನ ಆ ಸಾಂಕೇತಿಕ ಸಂಭಾಷಣೆಯ ಚಿತ್ರಪಟಗಳು ಈಗ ನೆಟ್ಟಿಗರ ಪ್ರೀತಿಗೂ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...