alex Certify
ಕನ್ನಡ ದುನಿಯಾ       Mobile App
       

Kannada Duniya

2000 ಕೆಜಿ ಭಾರದ ಟ್ರಕ್ ಎತ್ತಿದ್ಲು 19 ವರ್ಷದ ಗಟ್ಟಿಗಿತ್ತಿ

fire-rescueಜಿಎಂಸಿ ಟ್ರಕ್ ಕಡಿಮೆ ಅಂದ್ರೂ 2000 ಕೆಜಿ ಭಾರವಿರುತ್ತದೆ. 19 ವರ್ಷದ ಯುವತಿ ಚಾರ್ಲೆಟ್ ಹೆಫೆಲ್ಮೈರ್ ಎಂಬಾಕೆ ಆ ಟ್ರಕ್ ಅನ್ನು ಮೇಲಕ್ಕೆತ್ತಿ ತಂದೆಯನ್ನು ರಕ್ಷಿಸಿದ್ದಾಳೆ.

ಚಾರ್ಲೆಟ್ ಳ ತಂದೆ ಎರಿಕ್ ಟ್ರಕ್ ನಲ್ಲಿ ಕುಳಿತಿದ್ದಾಗ್ಲೇ ಅದು ಉರುಳಿ ಬಿದ್ದಿತ್ತು. ಆ ರಭಸಕ್ಕೆ ಟ್ರಕ್ ನಲ್ಲಿದ್ದ ಅನಿಲ ಸೋರಿಕೆಯಾಗಲು ಶುರುವಾಗಿತ್ತು. ಹೇಗಾದ್ರೂ ಹೊರಕ್ಕೆ ಬರಬೇಕು ಎಂದುಕೊಳ್ಳುವಷ್ಟರಲ್ಲಿ ಭಾರವಾದ ಜ್ಯಾಕ್ ಅವರ ಭುಜದ ಮೇಲೆ ಬಿದ್ದಿತ್ತು. ಟ್ರಕ್ ಗೆ ಬೆಂಕಿ ಹೊತ್ತಿಕೊಂಡಿತ್ತು. ಇನ್ನು ತಾನು ಬದುಕುವುದು ಅಸಾಧ್ಯ ಅಂತಾನೇ ಎರಿಕ್ ಅಂದುಕೊಂಡಿದ್ರು.

 

ಬೆಂಕಿಯನ್ನು ನೋಡಿ ಧಾವಿಸಿ ಬಂದ ಚಾರ್ಲೆಟ್, ಸಾಹಸಪಟ್ಟು ಹೊತ್ತಿ ಉರಿಯುತ್ತಿದ್ದ ಟ್ರಕ್ ಅನ್ನು ಮೇಲಕ್ಕೆತ್ತಿದ್ಲು. ಆಗ ಅಡಿಯಲ್ಲಿ ಸಿಲುಕಿದ್ದ ಎರಿಕ್ ಸುರಕ್ಷಿತವಾಗಿ ಹೊರಕ್ಕೆ ಬಂದ್ರು. ಮನೆಯ ಒಳಗೆ ಕೂಡ ಸಂಪೂರ್ಣ ಹೊಗೆ ಆವರಿಸಿತ್ತು. ಮನೆಯಲ್ಲಿದ್ದವರನ್ನೆಲ್ಲ ಸುರಕ್ಷಿತವಾಗಿ ಹೊರಕ್ಕೆ ಕರೆದುಕೊಂಡು ಬಂದ ಚಾರ್ಲೆಟ್, ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ಲು. ಚಾರ್ಲೆಟ್ ಳ ಸಾಹಸದಿಂದಾಗಿ ಆಕೆಯ ತಂದೆ ಅಗ್ನಿ ಅವಘಡದಲ್ಲಿ ಬದುಕಿ ಬಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...