alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನ್ಸರ್ ನಿಂದ ಬಳಲುತ್ತಿರುವ ಯುವಕನ ಕೊನೆಯಾಸೆ ಏನು ಗೊತ್ತಾ?

ಡಸ್ಟಿನ್ ಸ್ನೈಡರ್ ಗೆ ಕೇವಲ 19ರ ಹರೆಯ. ಆದ್ರೆ ಮಾರಕ ಕ್ಯಾನ್ಸರ್ ಅವನನ್ನು ಆವರಿಸಿಕೊಂಡಿದೆ. ತಾನು ಕೆಲವೇ ದಿನಗಳ ಅತಿಥಿ ಅನ್ನೋದು ಡಸ್ಟಿನ್ ಗೂ ಗೊತ್ತಿತ್ತು. ಕ್ಯಾನ್ಸರ್ ಗುಣಪಡಿಸಲಾಗದ ಸ್ಥಿತಿ ತಲುಪಿದೆ ಅಂತಾ ವೈದ್ಯರು ತಿಳಿಸಿದ್ರು. ಹಾಗಾಗಿ ಉಳಿದಿರೋ ಸಮಯವನ್ನು ಚೆನ್ನಾಗಿ ಜೀವಿಸಬೇಕೆಂದು ಡಸ್ಟಿನ್ ನಿರ್ಧರಿಸಿದ್ದ.

ಹೈಸ್ಕೂಲ್ ನಲ್ಲಿದ್ದಾಗ ಡಸ್ಟಿನ್ ಸಿಯೆರಾ ಸಿವೆರಿಯೊ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ತಾನು ಬದುಕಿರುವಷ್ಟು ಕಾಲ ಅವಳ ಜೊತೆ ಸಮಯ ಕಳೆಯಬೇಕೆಂದು ನಿರ್ಧರಿಸಿದ ಡಸ್ಟಿನ್, ಅದನ್ನು ಸಿಯೆರಾಗೂ ತಿಳಿಸಿದ. ಆಕೆಯನ್ನು ಡಿನ್ನರ್ ಡೇಟ್ ಗೆ ಕರೆದೊಯ್ದು, ತನ್ನನ್ನು ಮದುವೆ ಆಗುವಂತೆ ಪ್ರಪೋಸ್ ಮಾಡಿದ್ದಾನೆ.

ಇದಕ್ಕೆ ಸಿಯೆರಾ ಕೂಡ ಸಮ್ಮತಿಸಿದ್ದಾಳೆ. ಮಗ ಕೊನೆಯ ದಿನಗಳನ್ನು ಖುಷಿಯಾಗಿ ಕಳೆಯಲಿ ಅನ್ನೋ ಕಾರಣಕ್ಕೆ ಆತನ ತಾಯಿ ಕೂಡ ಮದುವೆಗೆ ಒಪ್ಪಿಕೊಂಡಿದ್ದಾರೆ. ಇದೇ ಭಾನುವಾರ ಡಸ್ಟಿನ್ ಹಾಗೂ ಸಿಯೆರಾಳ ವಿವಾಹ ನೆರವೇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...