alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಟೆಲ್ ಊಟ ತಿಂದ ಲಂಡನ್ ಯುವತಿ ಸಾವು

teen-dead

ಲಂಡನ್ ನಲ್ಲಿ ಭಾರತೀಯ ರೆಸ್ಟೋರೆಂಟ್ ಒಂದರಿಂದ ತರಿಸಿಕೊಂಡಿದ್ದ ಊಟ ತಿಂದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ.

ಊಟ ಸೇವಿಸಿದ ಬಳಿಕ ಅಲರ್ಜಿ ಉಂಟಾಗಿ ಯುವತಿ ಸಾವನ್ನಪ್ಪಿದ್ದಾಳೆ ಎನ್ನಲಾಗ್ತಾ ಇದ್ದು, ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಲಂಕಶೈರ್ ನಲ್ಲಿದ್ದ ರಾಯಲ್ ಸ್ಪೈಸ್ ರೆಸ್ಟೋರೆಂಟ್ ನಿಂದ ಮೆಗನ್ ಲೀ ಎಂಬ ಯುವತಿ ಇಂಡಿಯನ್ ಮೀಲ್ ತರಿಸಿಕೊಂಡಿದ್ಲು.

ಅದನ್ನು ತಿಂದ ತಕ್ಷಣ ಆಕೆಗೆ ಒಂದು ರೀತಿಯ ಅಲರ್ಜಿ ಶುರುವಾಗಿದೆ. ಕೂಡಲೇ ಯುವತಿಯನ್ನು ಆಸ್ಪತ್ರೆಗೂ ದಾಖಲಿಸಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೆಗನ್ ಲೀ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರ್ಲಕ್ಷ್ಯ ಹಾಗೂ ನರಹತ್ಯೆ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಯುವತಿಯ ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲಷ್ಟೆ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...