alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ ಗಾಗಿ ಕನ್ಯತ್ವವನ್ನೇ ಹರಾಜಿಗಿಟ್ಲು ಯುವತಿ..!

ಐಫೋನ್ 8 ಮೊಬೈಲ್ ಗಾಗಿ ಕನ್ಯತ್ವವನ್ನೇ ಹರಾಜಿಗಿಟ್ಟಿದ್ದ ಯುವತಿ ತಕ್ಕ ಪಾಠ ಕಲಿತಿದ್ದಾಳೆ. ಕ್ಸಿಯಾವೋ ಚೆನ್ ಎಂಬ 17 ವರ್ಷದ ಯುವತಿಗೆ ಐಫೋನ್ 8 ಕೊಂಡುಕೊಳ್ಳಬೇಕು ಅನ್ನೋ ಆಸೆ. ಆದ್ರೆ ಅವಳ ಬಳಿ ಹಣವಿರಲಿಲ್ಲ.

ಕೊನೆಗೆ ವೆಬ್ ಸೈಟ್ ಒಂದರಲ್ಲಿ ತನ್ನ ಕನ್ಯತ್ವ ಹರಾಜಿಗಿದೆ ಅಂತಾ ಜಾಹೀರಾತು ನೀಡಿದ್ಲು. 2300 ಪೌಂಡ್ ಹಣ ಕೂಡ ನಿಗದಿ ಮಾಡಿದ್ಲು. ಈ ಪೋಸ್ಟ್ ನೋಡಿದ ವ್ಲೊಗರ್ ಒಬ್ಬಳು, ಕ್ಸಿಯಾವೋ ಚೆನ್ ಳ ಸಂದರ್ಶನ ಏರ್ಪಡಿಸಿದ್ಲು.

ನಾನಾ ಎಂಬ ಆ ವ್ಲೊಗರ್ ಬಳಿ ಕ್ಸಿಯಾವೋ ಎಲ್ಲಾ ವಿಚಾರ ಹಂಚಿಕೊಂಡಿದ್ದಾಳೆ. ತನ್ನ ಸ್ನೇಹಿತರ ಬಳಿಯೆಲ್ಲಾ ಐಫೋನ್ 8 ಇದೆ. ಹಾಗಾಗಿ ತನಗೂ ಬೇಕು, ಅದಕ್ಕಾಗಿಯೇ ಕನ್ಯತ್ವ ಹರಾಜಿಗಿಟ್ಟಿದ್ದೇನೆ ಅಂತೆಲ್ಲಾ ಹೇಳಿದ್ದಾಳೆ.

ಕ್ಸಿಯಾವೋಗೆ 60 ಪೌಂಡ್ ಹಣವನ್ನು ಮುಂಗಡವಾಗಿ ಕೊಟ್ಟ ನಾನಾ, ಡೀಲ್ ಪಕ್ಕಾ ಮಾಡಿದ್ಲು. ಜಾಗವೊಂದನ್ನು ಕೂಡ ನಿಗದಿಪಡಿಸಿದ್ಲು. ಆ ಹೋಟೆಲ್ ರೂಮಿಗೆ ಬಂದ ಗಿರಾಕಿ ಅವಳ ಕೈಗೆ ಐಫೋನ್ 8 ಕೊಟ್ಟಿದ್ದಾನೆ. ಅವನ ಜೊತೆ ಸೇರಲು ಕ್ಸಿಯಾವೋ ಒಪ್ಪಿಕೊಂಡಿದ್ಲು.

ಆದ್ರೆ ದಿಢೀರ್ ಅಂತಾ ಕೋಣೆಯಲ್ಲಿ ಇನ್ನೂ ಮೂವರು ಪ್ರತ್ಯಕ್ಷರಾದ್ರು. ಕ್ಯಾಮರಾ ಜೊತೆ ನಾನಾ ಕೂಡ ಹಾಜರಾದ್ಲು. ಕೊನೆಗೆ ನಾನಾ ಅವಳನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಐಫೋನ್ ಹುಚ್ಚಿಗೆ ಕನ್ಯತ್ವ ಮಾರಲು ಹೊರಟಿದ್ದ ಯಡವಟ್ಟು ನಿರ್ಧಾರ ತಪ್ಪು ಅನ್ನೋದನ್ನು ಅರಿವು ಮಾಡಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...