alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಚಾರಕ್ಕೆ ವಯಸ್ಕರ ಚಿತ್ರದ ನಟಿ ಕರೆ ತಂದವರಿಗೀಗ ಮುಜುಗರ

tedcruz-reuters

ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ಜಾಹೀರಾತಿಗೆ ವಯಸ್ಕರ ಚಿತ್ರಗಳಲ್ಲಿ ನಟಿಸಿದ್ದ ನಟಿಯನ್ನು ಕರೆ ತಂದಿದ್ದ ರಾಜಕಾರಣಿಯೊಬ್ಬರು ಈಗ ವಿರೋಧಿಗಳ ಟೀಕೆಗೆ ಗುರಿಯಾಗಬೇಕಾಗಿ ಬಂದಿದೆ.

ಮುಂಬರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಸ್ಪರ್ಧಾಕಾಂಕ್ಷಿ ಟೆಡ್ ಕ್ರೂಜ್ ಈ ಯಡವಟ್ಟು ಮಾಡಿಕೊಂಡವರಾಗಿದ್ದು, ಚುನಾವಣಾ ಪ್ರಚಾರಕ್ಕಾಗಿ ರೂಪಿಸಿದ್ದ ಜಾಹೀರಾತಿನಲ್ಲಿ ವಯಸ್ಕರ ಚಿತ್ರಗಳಲ್ಲಿ ನಟಿಸಿದ್ದ ನಟಿ ಆಮಿ ಲಿಂಡ್ಸೆ ಕಾಣಿಸಿಕೊಂಡಿದ್ದರು.

ಇದು ವಿರೋಧಿಗಳ ಕುಹಕಕ್ಕೆ ಕಾರಣವಾಗಿದ್ದು, ಹೇಳಿಕೊಳ್ಳಲು ಏನೂ ಇಲ್ಲದಿರುವ ಕಾರಣ ಇಂತಹ ಗಿಮಿಕ್ ಗೆ ಮೊರೆ ಹೋಗಿದ್ದಾರೆ ಎಂದು ಗೇಲಿ ಮಾಡಿದ್ದರು. ಇದರಿಂದ ಮುಜುಗರಕ್ಕೊಳಗಾಗಿರುವ ಟೆಡ್ ಕ್ರೂಜ್, ಗೊತ್ತಾಗದೇ ಈ ಯಡವಟ್ಟಾಗಿದೆ ಎಂದು ಹೇಳಿಕೊಂಡಿದ್ದಾರಲ್ಲದೇ ಜಾಹೀರಾತನ್ನು ತೆಗೆಸಿದ್ದಾರೆ.

ಇದರಿಂದ ನಟಿ ಆಮಿ ಲಿಂಡ್ಸೆಗೆ ಮಾತ್ರ ತುಂಬಾ ಬೇಜಾರಾಗಿದೆಯಂತೆ. ಆದರೂ ಜಾಹೀರಾತಿನಲ್ಲಿ ಹೇಳಿದಂತೆ ತಾನು ಟೆಡ್ ಕ್ರೂಜ್ ಅವರಿಗೇ ಮತ ನೀಡುವುದಾಗಿ ಆಮಿ ಲಿಂಡ್ಸೆ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...