alex Certify
ಕನ್ನಡ ದುನಿಯಾ       Mobile App
       

Kannada Duniya

6 ವರ್ಷದ ಬಾಲಕನನ್ನು ಭಯೋತ್ಪಾದಕ ಎಂದ ಟೀಚರ್

ಅಮೆರಿಕಾದ ಶಾಲೆಯೊಂದರಲ್ಲಿ ಡೌನ್ ಸಿಂಡ್ರೋಮ್ ಖಾಯಿಲೆಯಿಂದ ಬಳಲುತ್ತಿದ್ದ ಆರು ವರ್ಷದ ಬಾಲಕ ಪದೇ ಪದೇ ಅಲ್ಲಾ ಹಾಗೂ ಬೂಮ್ ಶಬ್ದವನ್ನು ಉಚ್ಚರಿಸಿದ್ದಾನೆ. ಇದನ್ನು ಕೇಳಿದ ಶಿಕ್ಷಕರು ಬಾಲಕನನ್ನು ಭಯೋತ್ಪಾದಕ ಎಂದುಕೊಂಡು ಪೊಲೀಸರನ್ನು ಕರೆದಿದ್ದಾರೆ. ಇದಾದ ನಂತ್ರ ಬಾಲಕನ ತಂದೆ ಶಾಲೆ ವಿರುದ್ಧ ತಾರತಮ್ಯದ ದೂರು ದಾಖಲಿಸಿದ್ದಾರೆ.

ಬಾಲಕ ಮೊಹಮ್ಮದ್ ಸುಲೇಮಾನ್ ತಂದೆ ಪ್ರಕಾರ, ಸುಲೇಮಾನ್ ಡೌನ್ ಸಿಂಡ್ರೋಮ್ ಖಾಯಿಲೆಯಿಂದ ಬಳಲುತ್ತಿದ್ದಾನೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಟೆಕ್ಸಾಸ್ ಯೂಸ್ಟನ್ ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಮೊಹಮ್ಮದ್ ಶಾಲೆಯಲ್ಲಿ ಅಲ್ಲಾ ಎಂದು ಕರೆದಿದ್ದಾನೆ. ಪದೇ ಪದೇ ಅಲ್ಲಾನ ಹೆಸರು ಕೇಳಿದ ಶಿಕ್ಷಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಶಾಲೆ ಅಧಿಕಾರಿಗಳ ಪ್ರಕಾರ ಸುಲೇಮಾನ್ ಮಾತನಾಡುತ್ತಾನಂತೆ. ಆದ್ರೆ ಸುಲೇಮಾನ್ ತಂದೆ ಮಗ ಏನೂ ಮಾತಾಡಲ್ಲ ಎಂದಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...