alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದವನೀಗ ಜೈಲು ಪಾಲು

ಕ್ಯಾಬ್ ಚಾಲಕನೊಬ್ಬ 17 ವರ್ಷದ ಹುಡುಗಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮದ್ಯ ಸೇವಿಸಿದ್ದ ಆಕೆ ಕ್ಯಾಬ್ ಏರಿ ಮನೆಗೆ ಹೊರಟಿದ್ಲು. ಮನೆ ತಲುಪುತ್ತಿದ್ದಂತೆ ತನ್ನ ಬಳಿ ಹಣವಿಲ್ಲ ಅಂತಾ ಚಾಲಕನಿಗೆ ತಿಳಿಸಿದ್ದಾಳೆ. ಕೂಡಲೇ ಆತ ಅವಳನ್ನು ಮೆಕ್ ಡೊನಾಲ್ಡ್ಸ್ ಗೆ ಕರೆದೊಯ್ದಿದ್ದಾನೆ.

ನಂತರ ತನ್ನ ಮನೆಗೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಕತಾರ್ ಶಾಹಿನ್ ವಿವಾಹಿತ. ಆ ಹುಡುಗಿ ಒಬ್ಬ ವೇಶ್ಯೆ, ಅವಳ ಜೊತೆ ದೈಹಿಕ ಸಂಬಂಧ ಹೊಂದಲು 20 ಪೌಂಡ್ ಹಣ ಕೊಟ್ಟಿದ್ದೇನೆ ಅಂತಾ ಆತ ಹೇಳಿಕೊಳ್ತಿದ್ದಾನೆ. ಆದ್ರೆ ಸ್ವಾನ್ಸೀ ಕ್ರೌನ್ ಕೋರ್ಟ್ ನಲ್ಲಿ ಆತ ಅಪರಾಧಿಯೆಂದು ಸಾಬೀತಾಗಿದೆ.

ಕಂಠಪೂರ್ತಿ ಕುಡಿದಿದ್ದ ಯುವತಿ, ನಿದ್ದೆ ಮಾತ್ರೆಯನ್ನೂ ತೆಗೆದುಕೊಂಡಿದ್ಲು. ಕ್ಯಾಬ್ ಚಾಲಕ ಅದರ ಲಾಭ ಪಡೆದಿದ್ದ. ಲಿಫ್ಟ್ ಬೇಕಾ ಎಂದು ಕೇಳಿ ತಾನು ಫ್ರೀಯಾಗಿ ಮನೆಗೆ ಡ್ರಾಪ್ ಮಾಡ್ತೀನಿ ಅಂತಾ ಕರೆತಂದಿದ್ದ. ಊಟ ಮಾಡಿ ನಿನ್ನನ್ನು ಡ್ರಾಪ್ ಮಾಡ್ತೀನಿ ಅಂತಾ ಹೇಳಿ, ತನ್ನ ಮನೆಗೆ ಕರೆತಂದು ಅತ್ಯಾಚಾರ ಮಾಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...