alex Certify
ಕನ್ನಡ ದುನಿಯಾ       Mobile App
       

Kannada Duniya

ಈಜಿಪ್ಟ್ ನ ಮಮ್ಮಿಗಳ ದೇಹದ ಮೇಲೆ ಟ್ಯಾಟೂ ಪತ್ತೆ

ಈಜಿಪ್ಟ್ ನ ಎರಡು ಪುರಾತನ ಮಮ್ಮಿಗಳ ಕೈಗಳ ಮೇಲೆ ಅತ್ಯಂತ ಹಳೆಯ ಸಾಂಕೇತಿಕ ಟ್ಯಾಟೂ ಪತ್ತೆಯಾಗಿದೆ. ಪುರುಷನ ಶವದ ತೋಳಿನ ಮೇಲೆ ಕಾಡುಕೋಣ ಹಾಗೂ ಬಾರ್ಬರಿ ಕುರಿಯ ಹಚ್ಚೆ ಹಾಕಲಾಗಿದೆ.

ಮಹಿಳೆಯ ಶವದ ಭುಜ ಮತ್ತು ತೋಳಿನ ಮೇಲೆ ಎಸ್ ಆಕಾರದ ಟ್ಯಾಟೂ ಪತ್ತೆಯಾಗಿದೆ. ಬ್ರಿಟಿಷ್ ಮ್ಯೂಸಿಯಂ ಹಾಗೂ ಆಕ್ಸ್ ಫರ್ಡ್ ಯೂನಿವರ್ಸಿಟಿಯ ಸಂಶೋಧಕರು ಇದನ್ನು ಪತ್ತೆ ಮಾಡಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ಕೂಡ ಹಚ್ಚೆ ಹಾಕಿಸಿಕೊಳ್ಳುವ ಟ್ರೆಂಡ್ ಇತ್ತು ಅನ್ನೋದಕ್ಕೆ ಈ ಮಮ್ಮಿಗಳು ಸಾಕ್ಷಿಯಾಗಿವೆ. ಎಲ್ಲರಿಗೂ ಕಾಣಿಸುವಂತೆ ತೋಳು ಮತ್ತು ಭುಜಗಳ ಮೇಲೆ ಆಗ ಟ್ಯಾಟೂ ಹಾಕಲಾಗುತ್ತಿತ್ತು.

ಆಫ್ರಿಕಾದಲ್ಲಿ 1000 ವರ್ಷಗಳ ಹಿಂದೆಯೇ ಹಚ್ಚೆ ಹಾಕಲಾಗುತ್ತಿತ್ತು ಅನ್ನೋದಕ್ಕೆ ಈ ಹಿಂದೆಯೇ ಪುರಾವೆಗಳು ಸಿಕ್ಕಿವೆ. ಮಹಿಳೆಯರ ಟ್ಯಾಟೂ ಧೈರ್ಯ ಮತ್ತು ಮಾಂತ್ರಿಕತೆಯ ಸಂಕೇತಗಳಾಗಿದ್ರೆ ಪುರುಷರ ಹಚ್ಚೆಗಳು ವೈರುಧ್ಯತೆ ಮತ್ತು ಶಕ್ತಿಯ ಸಂಕೇತಗಳಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...