alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಶದಲ್ಲಿ ಗರ್ಭಿಣಿಯರು ಶಿಕ್ಷಣ ಪಡೆಯುವಂತಿಲ್ಲ: ವರ್ಷಕ್ಕೆ 2 ಬಾರಿ ನಡೆಯುತ್ತೆ ಟೆಸ್ಟ್

ವಿಶ್ವ ಎಷ್ಟೇ ಮುಂದುವರೆದರೂ ಮಹಿಳೆಯರ ಶೋಷಣೆ ಮಾತ್ರ ನಿಂತಿಲ್ಲ. ಆಫ್ರಿಕನ್ ದೇಶಗಳಲ್ಲಿ ಮಹಿಳೆರನ್ನು ಈಗ್ಲೂ ಕೀಳಾಗಿ ನೋಡಲಾಗುತ್ತಿದೆ. ಇದಕ್ಕೆ ಟಾಂಜಾನಿಯಾ ಉತ್ತಮ ನಿದರ್ಶನ. ಟಾಂಜಾನಿಯಾದಲ್ಲಿ ಗರ್ಭಿಣಿಯರು ಶಿಕ್ಷಣ ಪಡೆಯುವಂತಿಲ್ಲ.

ಗರ್ಭಿಣಿಯರು ಶಾಲೆ-ಕಾಲೇಜುಗಳಿಗೆ ಬರುವಂತಿಲ್ಲ. ಇದೇ ಕಾರಣಕ್ಕೆ ವರ್ಷಕ್ಕೆ ಎರಡು ಬಾರಿ ಶಿಕ್ಷಣ ಸಂಸ್ಥೆಗಳಲ್ಲಿಯೇ ಹುಡುಗಿಯರ ಪರೀಕ್ಷೆ ನಡೆಯುತ್ತದೆ. ಗರ್ಭಿಣಿ ಎಂಬ ಸಂಗತಿ ತಿಳಿದ್ರೆ ತಕ್ಷಣ ಶಾಲೆಯಿಂದ ಹೊರ ಹಾಕಲಾಗುತ್ತದೆ. ಎಂಟನೇ ತರಗತಿ ನಂತ್ರದ ಎಲ್ಲ ವಿದ್ಯಾರ್ಥಿನಿಯರಿಗೆ ಈ ಪರೀಕ್ಷೆ ನಡೆಯುತ್ತದೆ. ಗರ್ಭಧಾರಣೆ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಳ್ಳುವುದು ಅನಿವಾರ್ಯ.

2015 ರಲ್ಲಿ ಅಲ್ಲಿನ ಅಧ್ಯಕ್ಷರಾಗಿ ಪೊಂಬೆ ಮಗುಫುಲಿ ಅಧಿಕಾರಕ್ಕೆ ಬರ್ತಿದ್ದಂತೆ ಈ ನಿಯಮ ಜಾರಿಗೆ ಬಂದಿದೆ. 2017 ರ ಸಾರ್ವಜನಿಕ ರ್ಯಾಲಿಯಲ್ಲಿಯೂ ಪೊಂಬೆ ಮಗುಫುಲಿ ಈ ವಿಷ್ಯವನ್ನು ಹೇಳಿದ್ದಾರೆ. ಶಾಲೆಯ ಶಿಕ್ಷಕಿಯೊಬ್ಬರು ರೂಮಿಗೆ ಕರೆದು ವಿದ್ಯಾರ್ಥಿನಿಯರ ಪರೀಕ್ಷೆ ಮಾಡ್ತಾರಂತೆ. ಎಷ್ಟು ವಿದ್ಯಾರ್ಥಿನಿಯರು ಶಾಲೆ ಬಿಟ್ಟಿದ್ದಾರೆನ್ನುವ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿಯಿಲ್ಲ. ಆದ್ರೆ 8 ಸಾವಿರಕ್ಕೂ ಹೆಚ್ಚು ಹುಡುಗಿಯರು ಶಾಲೆ ಬಿಟ್ಟಿದ್ದಾರೆ ಎನ್ನಲಾಗ್ತಾಯಿದೆ. ಈ ಹಿಂದಿನ ಸರ್ಕಾರ ಗರ್ಭಿಣಿಯರಿಗೂ ಶಿಕ್ಷಣದ ಅವಕಾಶ ನೀಡಿತ್ತು. ಆದ್ರೆ ಪೊಂಬೆ ಮಗುಫುಲಿ ಸರ್ಕಾರ ಇದಕ್ಕೆ ವಿರೋಧಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...