alex Certify
ಕನ್ನಡ ದುನಿಯಾ       Mobile App
       

Kannada Duniya

ತಾಲಿಬಾನ್ ದಾಳಿ ಬಳಿಕ ಇದೇ ಮೊದಲ ಬಾರಿ ತವರಿಗೆ ಬಂದ ಮಲಾಲಾ

ನೊಬೆಲ್ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಕಾರ್ಯಕರ್ತೆ ಮಲಾಲಾ ಯುಸುಫ್ ಝಾಯಿ 6 ವರ್ಷಗಳ ಬಳಿಕ ತನ್ನ ತವರು ಪಾಕಿಸ್ತಾನಕ್ಕೆ ಮರಳಿದ್ದಾಳೆ. 2012ರಲ್ಲಿ ಮಲಾಲಾ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು.

ಮಲಾಲಾ ಭಾರೀ ಭದ್ರತೆಯ ನಡುವೆ ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ದೃಶ್ಯವನ್ನು ಪಾಕಿಸ್ತಾನದ ಜಿಯೋ ಟಿವಿ ಪ್ರಸಾರ ಮಾಡಿದೆ. 2014ರಲ್ಲಿ ಮಲಾಲಾಗೆ ನೊಬೆಲ್ ಪ್ರಶಸ್ತಿ ಲಭಿಸಿತ್ತು.

17ನೇ ವರ್ಷದಲ್ಲೇ ನೊಬೆಲ್ ಪಡೆದ ಮಲಾಲಾ, ಈ ಪ್ರಶಸ್ತಿ ಪುರಸ್ಕೃತಳಾದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಳು. 2012ರಲ್ಲಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಬಸ್ ತಡೆದ ತಾಲಿಬಾನ್ ಉಗ್ರರು, ಮಲಾಲಾ ತಲೆಗೆ ಗುಂಡು ಹಾರಿಸಿದ್ದರು.

ಈ ದಾಳಿ ಬಳಿಕ ಮಲಾಲಾ ಪಾಕಿಸ್ತಾನ ತೊರೆದು ಬ್ರಿಟನ್ ನಲ್ಲಿ ನೆಲೆಸಿದ್ದಳು. ತಾಲಿಬಾನ್ ದಾಳಿಯ ಬಳಿಕವೂ ಮಲಾಲಾ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ನಡೆಸುತ್ತಿದ್ದ ಹೋರಾಟವನ್ನು ನಿಲ್ಲಿಸಿರಲಿಲ್ಲ. ಪಾಕಿಸ್ತಾನ, ನೈಜೀರಿಯಾ, ಜೊರ್ಡನ್, ಸಿರಿಯಾ ಮತ್ತು ಕೀನ್ಯಾದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮಲಾಲಾ ಫಂಡ್ ಮೂಲಕ ನೆರವು ನೀಡಿದ್ದಾಳೆ. ನೊಬೆಲ್ ನಲ್ಲಿ ಪಡೆದ ಹಣದಿಂದ ಶಾಂಗ್ಲಾದಲ್ಲಿ ಶಾಲೆಯೊಂದನ್ನು ಕಟ್ಟಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...