alex Certify
ಕನ್ನಡ ದುನಿಯಾ       Mobile App
       

Kannada Duniya

ಗೋ ರಕ್ಷಣೆಗಾಗಿ ಆಸ್ತಿಯನ್ನು ಬಾಡಿಗೆಗೆ ನೀಡಿದ ವಿದೇಶಿ ಮಹಿಳೆ

ಜರ್ಮನಿಯಿಂದ 1978ರಲ್ಲಿ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ಫ್ರೆಡೆರಿಕ್ ಐರಿನಾ ಭಾರತದಲ್ಲಿಯೇ ನೆಲೆ ನಿಂತಿದ್ದಾರೆ. ಮಥುರಾದಲ್ಲಿ 1200 ಹಸುಗಳನ್ನು ಆರೈಕೆ ಮಾಡ್ತಿದ್ದಾರೆ. ಇದಕ್ಕಾಗಿ ಬರ್ಲಿನ್ ನಲ್ಲಿರುವ ತಮ್ಮ ಆಸ್ತಿಯನ್ನು ಬಾಡಿಗೆಗೆ ನೀಡಿದ್ದಾರೆ ಫ್ರೆಡೆರಿಕ್.

ಮಥುರಾಕ್ಕೆ ಬಂದ ಕಥೆಯನ್ನು ವಿವರವಾಗಿ ಹೇಳಿದ್ದಾರೆ ಫ್ರೆಡೆರಿಕ್. ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ಫ್ರೆಡೆರಿಕ್ ಇಲ್ಲಿನ ಜನ-ಜೀವನವನ್ನು ಅರ್ಥ ಮಾಡಿಕೊಳ್ಳಲು ಬಯಸಿದ್ದರಂತೆ. ಇದಕ್ಕಾಗಿ ಒಬ್ಬ ಗುರುವಿನ ಹುಡುಕಾಟದಲ್ಲಿದ್ದರಂತೆ. ಗುರುವಿಗಾಗಿ ರಾಧಾ ಕುಂಡ್ ಗೆ ಹೋದ ಫ್ರೆಡೆರಿಕ್ ಗೆ ಯಾರೋ ಹಸು ಸಾಕುವಂತೆ ಹೇಳಿದ್ದಾರೆ. ಹಸು ಖರೀದಿ ಮಾಡಿದ ಫ್ರೆಡೆರಿಕ್ ಜೀವನ ಸಂಪೂರ್ಣ ಬದಲಾಗಿ ಹೋಯ್ತಂತೆ.

ಹಸುಗಳ ಬಗ್ಗೆ ಬರೆದ ಪುಸ್ತಕ ಓದಿದ ಫ್ರೆಡೆರಿಕ್ ಹಿಂದಿ ಕಲಿತ್ರಂತೆ. ಹಾಲು ಕೊಡದ ಆಕಳುಗಳನ್ನು ಬೀದಿಗೆ ಬಿಡುವ ಇಲ್ಲಿನ ಜನರನ್ನು ನೋಡಿದ ಫ್ರೆಡೆರಿಕ್ ಒಂದು ನಿರ್ಧಾರಕ್ಕೆ ಬಂದ್ರು. ಸುರಭಾಯಿ ಗೋಸೇವಾ ಹೆಸರಿನ ಗೋ ಶಾಲೆ ಶುರುಮಾಡಿದ್ರು. ಮಥುರಾದಲ್ಲಿ ಜನರು ಫ್ರೆಡೆರಿಕ್ ರನ್ನು ಸುದೇವಿ ಎಂದು ಕರೆಯುತ್ತಾರೆ.

ಹಸುಗಳು ಮಕ್ಕಳಿದ್ದಂತೆ. ಅವುಗಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಇವರು. ಈಗ 1200 ಹಸುಗಳಿದ್ದು, ಹೆಚ್ಚಿನ ಹಸುಗಳನ್ನು ಸಾಕಲು ಜಾಗವಿಲ್ಲ ಎನ್ನುತ್ತಾರೆ ಫ್ರೆಡೆರಿಕ್. ಗೋಶಾಲೆಯಲ್ಲಿ 60 ಕೆಲಸಗಾರರಿದ್ದು, ತಿಂಗಳಿಗೆ 22 ಲಕ್ಷ ಖರ್ಚು ಮಾಡ್ತಾರೆ ಫ್ರೆಡೆರಿಕ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...