alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆಯನ್ನು ನೋಡಿದವರಿಗೆ ನೆನಪಾಗ್ತಿದ್ದಾಳೆ ಐಶ್ವರ್ಯಾ ರೈ

ಜಗತ್ತಿನಲ್ಲಿ ಒಬ್ಬರನ್ನೇ ಹೋಲುವ 12 ಜನರಿರ್ತಾರಂತೆ. ಇಲ್ಲೊಬ್ಳು ಚೆಲುವೆ ಥೇಟ್ ನಟಿ ಐಶ್ವರ್ಯಾ ರೈಯಂತಿದ್ದಾಳೆ. ಈಕೆಯ ಹೆಸರು ಮಹ್ಲಾಘ ಜಬೇರಿ, ಪರ್ಶಿಯಾದ ರೂಪದರ್ಶಿ. ಇವಳ ಕಣ್ಣುಗಳ ಬಣ್ಣ, ಮುಖ ಚಹರೆ ಎಲ್ಲವೂ ಐಶ್ವರ್ಯಾಳನ್ನು ಹೋಲುತ್ತವೆ.

ತನ್ನ ಲುಕ್ ನಿಂದಾಗಿಯೇ ಜಬೇರಿ ಸಾಮಾಜಿಕ ತಾಣಗಳಲ್ಲಿ ಜನಪ್ರಿಯತೆ ಪಡೆದಿದ್ದಾಳೆ. ಇರಾನ್ ನಲ್ಲಿ ಜನಿಸಿದ್ದ ಜಬೇರಿ, ಸದ್ಯ ಕ್ಯಾಲಿಫೋರ್ನಿಯಾದಲ್ಲಿ ಸೆಟಲ್ ಆಗಿದ್ದಾಳೆ. 27ರ ಹರೆಯದ ಜಬೇರಿ, ಐಶ್ವರ್ಯಾಳ ತದ್ರೂಪಿ ಅನ್ನೋ ವಿಚಾರ ಜಾಲತಾಣಗಳಲ್ಲಿ ಸಂಚಲನವನ್ನೇ ಮೂಡಿಸಿತ್ತು.

ಗಣಿತ ಮತ್ತು ಭೌತಶಾಸ್ತ್ರದಲ್ಲಿ ಡಿಪ್ಲೊಮಾ ಮುಗಿಸಿರೋ ಈ ಸುಂದರಿ, ಬ್ಯುಸಿನೆಸ್ ಸ್ಟಡೀಸ್ ಪದವೀಧರೆ. ಯೋಗ, ಕುದುರೆ ಸವಾರಿಯಲ್ಲಿ ನಿಪುಣೆ. ಮಾಡೆಲಿಂಗ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರೋ ಜೂನಿಯರ್ ಐಶೂಗೆ ಅವಕಾಶಗಳ ಕೊರತೆಯೇನಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...