alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷ 50 ಆದ್ರೂ 20 ವರ್ಷದವರಂತೆ ಕಾಣಲು ಕಾರಣವೇನು ಗೊತ್ತಾ..?!

ವಯಸ್ಸನ್ನು ಮುಚ್ಚಿಡಲು ಎಲ್ಲರೂ ಪ್ರಯತ್ನಪಡ್ತಾರೆ. ವಯಸ್ಸು ಹೆಚ್ಚಾಗ್ತಿದ್ದಂತೆ ಹೆಚ್ಚು ಟೆನ್ಷನ್ ಆಗೋದು ಮಹಿಳೆಯರಿಗೆ. ಮುಖದ ಸುಕ್ಕು ಕಾಣದಂತೆ ನೋಡಿಕೊಳ್ಳಲು ಮೇಕಪ್, ಬ್ಯೂಟಿಪಾರ್ಲರ್ ಗೆ ಸುತ್ತುವ ಮಹಿಳೆಯರು ವ್ಯಾಯಾಮ, ಯೋಗದ ಮೊರೆ ಹೋಗ್ತಾರೆ. ಆದ್ರೆ ಈ ದೇಶದಲ್ಲಿ ಮಾತ್ರ ವಯಸ್ಸಾದ ಮಹಿಳೆಯೇ ಕಾಣೋದಿಲ್ಲ.

ವಯಸ್ಸು 50 ದಾಟಿದ್ರೂ 20 ರ ಹರೆಯದ ಹುಡುಗಿಯರಂತೆ ಕಾಣಿಸುತ್ತಾರೆ ಇವ್ರು. ನಾವು ಹೇಳ್ತಿರೋದು ಥೈವಾನ್ ದೇಶಿಗರ ಬಗ್ಗೆ. ಇಲ್ಲಿನವರು ಸುಂದರವಾಗಿ ಕಾಣಲು ಯಾವುದೇ ಡಯಟ್ ಮಾಡೋದಿಲ್ಲ. ವ್ಯಾಯಾಮ, ಜಿಮ್ ನಿಂದಲೂ ದೂರ. ಆದ್ರೆ ಸೌಂದರ್ಯದಲ್ಲಿ ಮಾತ್ರ ಮುಂದಿದ್ದಾರೆ.

ಮಹಿಳೆಯರಿಗೆ ಮಳೆಯಲ್ಲಿ ನೆನೆಯುವುದು ಅಲರ್ಜಿಯಂತೆ. ಜೊತೆಗೆ ಸೂರ್ಯನ ಕಿರಣಕ್ಕೆ ಮೈಯೊಡ್ಡಲು ಇಲ್ಲಿನವರು ಹೆದರುತ್ತಾರೆ. ಸೂರ್ಯನ ಕಿರಣಗಳು ವಯಸ್ಸು ಕಡಿಮೆ ಮಾಡುತ್ತವೆ ಎಂಬುದು ಇವ್ರ ನಂಬಿಕೆ. ಸೂರ್ಯನ ಕಿರಣದಿಂದ ದೂರವಿರುವ ಥೈವಾನ್ ಮಹಿಳೆಯರು ದಿನದಲ್ಲಿ 10 ಗಂಟೆ ಬೆವರು ಸುರಿಸಿ ಕೆಲಸ ಮಾಡ್ತಾರೆ. ಆಟದಲ್ಲಿಯೂ ಈ ದೇಶದ ಜನರಿಗೆ ಆಸಕ್ತಿ ಹೆಚ್ಚಿದೆ.

ಥೈವಾನ್ ನಲ್ಲಿ 2 ಕೋಟಿ 36 ಲಕ್ಷ ಜನಸಂಖ್ಯೆಯಿದ್ದು, ಅದ್ರಲ್ಲಿ ಶೇಕಡಾ 70 ರಷ್ಟು ಮಂದಿ ಬೌದ್ಧ ಧರ್ಮವನ್ನು ನಂಬುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...