alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಸೇಜ್ ನೋಡದ ಪತಿಗೆ ಪತ್ನಿ ಕೊಟ್ಟಿದ್ದೇನು ಗೊತ್ತಾ?

taiwan-mes

ತೈಪೆ: ಪತ್ನಿ ಕಳಿಸಿದ ಮೆಸೇಜ್ ಅನ್ನು ನೋಡದ ಕಾರಣ ವ್ಯಕ್ತಿಯೊಬ್ಬ ವಿಚ್ಛೇದನ ನೀಡಬೇಕಾಗಿ ಬಂದಿದೆ.

12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ತೈವಾನ್ ಮಹಿಳೆಯೊಬ್ಬಳು ಮೆಸೇಜ್ ನೋಡದ ಪತಿಗೆ ಡೈವೋರ್ಸ್ ನೀಡಿದ್ದಾಳೆ.

ಹೆಸಿನ್ ನ 50 ವರ್ಷದ ಮಹಿಳೆಗೆ 6 ತಿಂಗಳ ಹಿಂದೆ ಅಪಘಾತವಾಗಿ ಆಸ್ಪತ್ರೆ ಸೇರಿದ್ದಾಳೆ. ತನಗೆ ಅಪಘಾತವಾಗಿರುವ ವಿಷಯವನ್ನು ವಾಟ್ಸಾಪ್ ನಲ್ಲಿ ಗಂಡನಿಗೆ ತಿಳಿಸಿದ್ದಾಳೆ.

ಆದರೆ, ಆ ಮೆಸೇಜ್ ಅನ್ನು ವಿಳಂಬವಾಗಿ ನೋಡಿದ ಪತಿರಾಯ ರಿಪ್ಲೈ ಕೂಡ ಮಾಡಿಲ್ಲ. ತಾನು ಕಳಿಸಿದ ಮೆಸೇಜ್ ವಿಳಂಬವಾಗಿ ನೋಡಿದ್ದಲ್ಲದೇ, ಅಪಘಾತವಾಗಿದ್ದರೂ, ಮೆಸೇಜ್ ಮೂಲಕವೂ ಸ್ಪಂದಿಸದ ಗಂಡನೇ ನನಗೆ ಬೇಡವೆಂದು ಮಹಿಳೆ ಕೋರ್ಟ್ ಮೊರೆ ಹೋಗಿದ್ದಾಳೆ.

ಗಂಡನಿಂದ ವಿಚ್ಛೇದನ ಕೊಡಿಸಿ ಎಂದು ಅರ್ಜಿ ಸಲ್ಲಿಸಿದ್ದಾಳೆ. ವಿಚಾರಣೆ ನಡೆಸಿದ ಕೋರ್ಟ್ ಪತ್ನಿಯ ಮೆಸೇಜ್ ನೋಡದ ಕಾರಣ ಡೈವೋರ್ಸ್ ನೀಡಿದೆ.

ವಾಟ್ಸಾಪ್ ನಲ್ಲಿ ಮೆಸೇಜ್ ನೋಡಿದ ಬಗ್ಗೆ ನೀಲಿ ಟಿಕಿಂಗ್ ಬರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...