alex Certify
ಕನ್ನಡ ದುನಿಯಾ       Mobile App
       

Kannada Duniya

2 ಲಕ್ಷ ಪಾಸ್ಪೋರ್ಟ್ ಗಳನ್ನು ನಾಶ ಮಾಡುತ್ತಿದೆ ತೈವಾನ್, ಕಾರಣವೇನು ಗೊತ್ತಾ….?

ತೈವಾನ್ ಮುದ್ರಣಗೊಂಡಿರುವ ಸುಮಾರು 2 ಲಕ್ಷ ಪಾಸ್ ಪೋರ್ಟ್ ಗಳನ್ನು ನಾಶ ಮಾಡುತ್ತಿದೆ. ಈ ಪೈಕಿ 285 ಪಾಸ್ ಪೋರ್ಟ್ ಗಳನ್ನು ಈಗಾಗಲೇ ವಿತರಿಸಲಾಗಿದ್ದು, ಅವುಗಳನ್ನು ಹಿಂಪಡೆಯಲಾಗಿದೆ.

ಅಷ್ಟಕ್ಕೂ ಈ ಪಾಸ್ ಪೋರ್ಟ್ ಗಳನ್ನು ನಾಶ ಮಾಡುವುದಕ್ಕೆ ಕಾರಣವಾಗಿರುವುದು ಮುದ್ರಣದಲ್ಲಾದ ಒಂದು ಪ್ರಮಾದ. ಈ ಪಾಸ್ ಪೋರ್ಟ್ ಗಳಲ್ಲಿ ತನ್ನ ದೇಶದ ತಯಾನ್ ಅಂತರಾಷ್ಟೀಯ ವಿಮಾನ ನಿಲ್ದಾಣದ ಚಿತ್ರದ ಬದಲು ಅಮೆರಿಕಾದ ವಾಷಿಂಗ್ಟನ್ ಡಲ್ಲಾಸ್ ಅಂತರಾಷ್ಟೀಯ ವಿಮಾನ ನಿಲ್ದಾಣದ ಚಿತ್ರ ಪ್ರಕಟವಾಗಿರುವುದೇ ಇದಕ್ಕೆ ಕಾರಣ.

ಸಾಮಾಜಿಕ ಜಾಲತಾಣ ಬಳಕೆದಾರರು ಮೊದಲಿಗೆ ಈ ಪ್ರಮಾದವನ್ನು ಗುರುತಿಸಿ ಶೇರ್ ಮಾಡಿದರು. ಇದನ್ನು ತೈವಾನ್ ವಿದೇಶಾಂಗ ಸಚಿವಾಲಯ ಅಲ್ಲಗಳೆದಿತ್ತಾದರೂ ಬಳಿಕ ಆಗಿರುವ ಪ್ರಮಾದವನ್ನು ಒಪ್ಪಿಕೊಂಡು ಈ ಪಾಸ್ ಪೋರ್ಟ್ ಗಳನ್ನು ನಾಶ ಮಾಡಲು ಮುಂದಾಗಿದೆ. ಈಗಾಗಲೇ ವಿತರಿಸಿರುವವರಿಂದ ಪಾಸ್ ಪೋರ್ಟ್ ಗಳನ್ನು ಹಿಂಪಡೆಯಲಾಗಿದ್ದು. ಅವರಿಗೆ ತಾತ್ಕಾಲಿಕವಾಗಿ ಇ-ಪಾಸ್ ಪೋರ್ಟ್ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...