alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಲ್ಲಿ ಬೆವರಿನ ಕಿರಿಕಿರಿ ತಪ್ಪಿಸುತ್ತೆ ಟಾ-ಟಾ ಟವೆಲ್

ta-ta-towel-bra-pictures

ಬೆವರು ಅಂದ್ರೆ ಒಂಥರಾ ಕಿರಿಕಿರಿ, ವಾಸನೆ ಬೇರೆ. ಅದ್ರಲ್ಲೂ ಸ್ತನಗಳ ಕೆಳಗೆ ಬೆವರು ಕಾಣಿಸಿಕೊಂಡ್ರೆ ಮಹಿಳೆಯರ ಪೇಚಾಟ ಹೇಳತೀರದು. ಈ ಸಮಸ್ಯೆಗೆ ಲಾಸ್ ಎಂಜಲೀಸ್ ನ ಎರಿನ್ ರಾಬರ್ಟ್ಸನ್ ಪರಿಹಾರ ಕಂಡು ಹಿಡಿದಿದ್ದಾರೆ. ಅದೇನ್ ಗೊತ್ತಾ? ಟಾ-ಟಾ ಟವೆಲ್.

ಬ್ರಾ ಮತ್ತು ಟವೆಲ್ ನ ಕಾಂಬಿನೇಷನ್ ಇದು. ಕಾನ್ಫೆಟ್ಟಿ ಫ್ಯಾಬ್ರಿಕ್ ನಿಂದ ತಯಾರಿಸಿರೋದ್ರಿಂದ ಇದನ್ನು ಧರಿಸಿದ್ರೆ ಬೆವರಿನ ಕಿರಿಕಿರಿ ಇರುವುದಿಲ್ಲ. ಹಾಲ್ಟರ್ ನೆಕ್ ಇರೋ ಬಿಕಿನಿ ಟಾಪ್ ನಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಈ ಟಾ ಟಾ ಟವೆಲ್ ಗೆ ಬಹುಬೇಡಿಕೆಯಿದ್ದು, ಹಾಟ್ ಕೇಕ್ ನಂತೆ ಸೇಲ್ ಆಗ್ತಿದೆ.

ಎರಿನ್ ಮೊದಲ ಬಾರಿ ಡೇಟ್ ತೆರಳಲು ರೆಡಿಯಾಗುತ್ತಿದ್ಲು. ಬೆವರಿನಿಂದಾಗಿ ಅವಳು ಮಾಡಿಕೊಂಡಿದ್ದ ಮೇಕಪ್ ಕೂಡ ವ್ಯರ್ಥವಾಗಿತ್ತು. ಬೇಬಿ ಪೌಡರ್, ಬಟ್ಟೆ ಎಲ್ಲವನ್ನೂ ಸ್ತನಗಳ ಕೆಳಗಿಟ್ಟು ಬೆವರು ತಡೆಯಲು ಯತ್ನಿಸಿದ್ದಾಳೆ. ಆದ್ರೆ ಸಾಧ್ಯವಾಗಿಲ್ಲ.ಈ ಘಟನೆಯ ನಂತರ ಬೆವರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕೆಂದು ಎರಿನ್ ಹಠ ತೊಟ್ಟಿದ್ಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...