alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರ-ಸಹೋದರಿ ಆಪ್ತತೆ ನೋಡಿ ದೂರ ಹೋದ್ಲು ಪ್ರೇಯಸಿ

ಪ್ರೀತಿಯಲ್ಲಿ ಬ್ರೇಕ್ ಅಪ್ ಆಗೋದು ಮಾಮೂಲಿ. ಅನೇಕರು ಅನೇಕ ಕಾರಣಕ್ಕೆ ಬ್ರೇಕ್ ಅಪ್ ಮಾಡಿಕೊಳ್ತಾರೆ. ಆದ್ರೆ ಈಕೆ ಬ್ರೇಕ್ ಅಪ್ ಗೆ ನೀಡಿದ ಕಾರಣ ಆಶ್ಚರ್ಯ ಹುಟ್ಟಿಸುವಂತಿದೆ.

ಸಿಡ್ನಿಯಲ್ಲಿ ಜಸಿಂಟೊ ಕೊಲ್ಹೋ ತನ್ನ ಗೆಳೆಯ ಜ್ಯಾಕ್ ನಿಂದ ದೂರವಾಗಿದ್ದಾಳೆ. ಕಳೆದ ನಾಲ್ಕು ತಿಂಗಳಿಂದ ಇಬ್ಬರು ಡೇಟಿಂಗ್ ಮಾಡ್ತಿದ್ದರು. ಆದ್ರೆ ಜಾಕ್ ಸಹೋದರಿ ಜೊತೆ ಹೆಚ್ಚು ಆಪ್ತನಾಗಿದ್ದಾನೆ ಎನ್ನುವ ಕಾರಣಕ್ಕೆ ಜಸಿಂಟೊ ಜ್ಯಾಕ್ ನಿಂದ ದೂರವಾಗಿದ್ದಾಳೆ.

ಸದಾ ಜಾಕ್ ತನ್ನನ್ನು ಸಹೋದರಿ ಜೊತೆ ಹೋಲಿಕೆ ಮಾಡ್ತಾನೆ. ಆಕೆ ಜೊತೆ ಸ್ಪರ್ಧೆ ನೀಡಲು ಸಾಧ್ಯವಿಲ್ಲ ಎನ್ನುತ್ತಾನೆ. ಜಾಕ್ ಹಾಗೂ ಜಸಿಂಟೊ ಒಟ್ಟಿಗೆ ಇರಲು ಸಹೋದರಿ ಬಿಡುವುದಿಲ್ಲ. ಸದಾ ಜಾಕ್ ಜೊತೆ ಆಕೆ ಇರ್ತಾಳೆ. ಇಬ್ಬರೂ ಒಟ್ಟಿಗೆ ಮಲಗ್ತಾರೆ ಎಂದು ಜಸಿಂಟೊ ದೂರಿದ್ದಾಳೆ.

ಮಲಿಂಡಾಗೆ ತನ್ನ ಸಹೋದರನಂತ ವ್ಯಕ್ತಿ ಸಿಕ್ಕಿಲ್ಲವಂತೆ. ಹಾಗಾಗಿ ಆಕೆ ಇನ್ನೂ ಸಿಂಗಲ್ ಆಗಿದ್ದೇನೆ ಎಂದು ಜಸಿಂಟೊಗೆ ಹೇಳಿದ್ದಳಂತೆ. ಸಹೋದರ-ಸಹೋದರಿ ಆಪ್ತರಾಗಿರುವುದು ಖುಷಿ ವಿಷ್ಯ. ಆದ್ರೆ ಅಗತ್ಯಕ್ಕಿಂತ ಹೆಚ್ಚು ಆಪ್ತರಾಗಿದ್ದಾರೆ ಇವರು ಎಂದು ಜಸಿಂಟಾ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...