alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಬಳಸದವನ ಮೇಲೆ ಬಿತ್ತು ರೇಪ್ ಕೇಸ್

court

ಸ್ವಿಡ್ಜರ್ಲೆಂಡ್ ನ ಲೋಸನೆಯಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ದೈಹಿಕ ಸಂಬಂಧ ಬೆಳೆಸಿದ ಸಮಯದಲ್ಲಿ ಸಂಗಾತಿಯ ಅರಿವಿಗೆ ಬಾರದಂತೆ ಕಾಂಡೋಮ್ ತೆಗೆದು ಹಾಕಿದ್ದಕ್ಕಾಗಿ ಕೋರ್ಟ್ ಅದನ್ನು ಅತ್ಯಾಚಾರ ಅಂತಾ ತೀರ್ಪು ನೀಡಿದೆ.

ಪರಸ್ಪರ ಒಪ್ಪಿಗೆಯ ಮೇರೆಗೆ ಕಾಂಡೋಮ್ ಬಳಸಲು ನಿರ್ಧರಿಸಲಾಗಿತ್ತು, ಆದ್ರೆ ಅದನ್ನು ತೆಗೆದು ಹಾಕುವ ಮೂಲಕ ವ್ಯಕ್ತಿ ಅಸುರಕ್ಷಿತ ಸಂಬಂಧಕ್ಕೆ ಕಾರಣನಾಗಿದ್ದಾನೆ, ಹಾಗಾಗಿ ಇದೊಂದು ಅತ್ಯಾಚಾರ ಅಂತಾ ಕೋರ್ಟ್ ಹೇಳಿದೆ. ಅಷ್ಟೇ ಅಲ್ಲ ಅಪರಾಧಿಗೆ ಕೋರ್ಟ್ 12 ತಿಂಗಳುಗಳ ಜೈಲು ಶಿಕ್ಷೆಯನ್ನು ಕೂಡ ವಿಧಿಸಿದೆ.

ಶಿಕ್ಷೆಗೊಳಗಾದ ವ್ಯಕ್ತಿ ಫ್ರಾನ್ಸ್ ಮೂಲದವನು. ಸ್ವಿಡ್ಜರ್ಲೆಂಡ್ ನ ಮಹಿಳೆ ಜೊತೆ ಸ್ನೇಹ ಬೆಳೆಸಿದ್ದ. 2015ರ ಜೂನ್ ನಲ್ಲಿ ಎರಡನೇ ಬಾರಿ ಡೇಟಿಂಗ್ ನಡೆಸಿದ್ದ ಜೋಡಿ, ದೈಹಿಕ ಸಂಬಂಧ ಬೆಳೆಸಿದ್ದರು. ಆದ್ರೆ ಈ ವೇಳೆ ವ್ಯಕ್ತಿ ಕಾಂಡೋಮ್ ತೆಗೆದು ಹಾಕಿದ್ದ ಅನ್ನೋದು ನಂತರ ಆ ಮಹಿಳೆಯ ಗಮನಕ್ಕೆ ಬಂದಿತ್ತು. ಆತನ ವಿರುದ್ಧ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಳು. ಆತ ಕಾಂಡೋಮ್ ಬಳಸುತ್ತಿಲ್ಲ ಎಂಬುದು ಅರಿವಿಗೆ ಬಂದಿದ್ದರೆ ಬಹುಷಃ ಮಹಿಳೆ ದೈಹಿಕ ಸಂಬಂಧಕ್ಕೆ ನಿರಾಕರಿಸುವ ಸಾಧ್ಯತೆಯೂ ಇತ್ತು ಅಂತಾ ಕೋರ್ಟ್ ಅಭಿಪ್ರಾಯಪಟ್ಟಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...