alex Certify
ಕನ್ನಡ ದುನಿಯಾ       Mobile App
       

Kannada Duniya

ದಾರಿ ತಪ್ಪಿದ ಫುಟ್ಬಾಲ್ ಪ್ರೇಮಿಗಳು ಹೋಗಿದ್ದೆಲ್ಲಿಗೆ ಗೊತ್ತಾ?

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಗಳನ್ನು ವೀಕ್ಷಿಸಲು ಫುಟ್ಬಾಲ್ ಪ್ರೇಮಿಗಳು ವಿವಿಧ ದೇಶಗಳಿಂದ ಆಗಮಿಸುತ್ತಿದ್ದಾರೆ. ಇವರುಗಳಿಗೆ ರಷ್ಯಾದಲ್ಲಿ ಭಾಷೆ ದೊಡ್ಡ ಸಮಸ್ಯೆಯಾಗಿದ್ದು, ಫಿಫಾ ವಿಶ್ವಕಪ್ ಪಂದ್ಯಕ್ಕಾಗಿಯೇ ಸಹಸ್ರಾರು ಮಂದಿ ಭಾಷಾಂತರಕಾರರನ್ನು ನೇಮಿಸಿಕೊಳ್ಳಲಾಗಿದ್ದರೂ ಪ್ರಯೋಜನವಾಗಿಲ್ಲ.

ಭಾಷೆ ಸಮಸ್ಯೆ ತಲೆದೋರಿದ ಕಾರಣಕ್ಕೆ ಪಂದ್ಯ ವೀಕ್ಷಿಸಲು ಸ್ವಿಜರ್ಲ್ಯಾಂಡ್ ನಿಂದ ಆಗಮಿಸಿದ್ದ ಫುಟ್ಬಾಲ್ ಪ್ರೇಮಿಗಳು ಸಾವಿರಾರು ಕಿ.ಮೀ. ದೂರದ ಮತ್ತೊಂದು ಪ್ರದೇಶಕ್ಕೆ ತೆರಳಿದ ಘಟನೆ ನಡೆದಿದೆ.

ಭಾನುವಾರದಂದು ಸ್ವಿಜರ್ಲ್ಯಾಂಡ್ ತಂಡ ಬ್ರೆಜಿಲ್ ವಿರುದ್ಧ ರಷ್ಯಾದ ರೋಸ್ತಾವ್ ಅನ್ ಡನ್ ನಗರದ ಕ್ರೀಡಾಂಗಣದಲ್ಲಿ ಸೆಣೆಸಬೇಕಿತ್ತು. ಈ ಪಂದ್ಯವನ್ನು ವೀಕ್ಷಿಸಲು ಸ್ವಿಜರ್ಲ್ಯಾಂಡ್ ಅಭಿಮಾನಿಗಳು ಆಗಮಿಸಿದ್ದು ಭಾಷೆಯ ಸಮಸ್ಯೆಯಿಂದಾಗಿ ರೋಸ್ತಾವ್ ಅನ್ ಡನ್ ಬದಲು ಅಲ್ಲಿಂದ 1281 ಕಿಮೀ ದೂರದಲ್ಲಿರುವ ರೋಸ್ತಾವ್ ವಲಿಕಿ ನಗರಕ್ಕೆ ತೆರಳಿದ್ದಾರೆ. ಕಡೆಗೆ ಪೊಲೀಸರ ಸಹಕಾರದಿಂದಾಗಿ ಸಮಸ್ಯೆ ಬಗೆಹರಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...