alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗರ ಜೊತೆ ಈಜು ಕಲಿಯುವುದೀಗ ಅನಿವಾರ್ಯ

judgement-08764ಮುಸ್ಲಿಂ ಹುಡುಗಿಯರು ಹಾಗೂ ಮಹಿಳೆಯರಿಗೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಿಜರ್ಲ್ಯಾಂಡ್ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಸ್ವಿಜರ್ಲ್ಯಾಂಡ್ ನ ಶಾಲೆಗಳಲ್ಲಿ ಮುಸ್ಲಿಂ ಹುಡುಗಿಯರು ಹುಡುಗರ ಜೊತೆ ಈಜು ತರಬೇತಿ ಪಡೆಯುವುದನ್ನು ಅನಿವಾರ್ಯ ಮಾಡಿದೆ.

ತನ್ನ ಹೆಣ್ಣು ಮಕ್ಕಳಿಬ್ಬರು ಈಜು ತರಬೇತಿ ಪಡೆಯುತ್ತಿದ್ದು, ಹುಡುಗರು ಹಾಗೂ ಹುಡುಗಿಯರಿಗೆ ಒಟ್ಟಿಗೆ ಸ್ವಿಮ್ ಕಲಿಸಲಾಗ್ತಾ ಇದೆ. ಇದರಿಂದ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಮಹಿಳೆಯೊಬ್ಬಳು ಕೋರ್ಟ್ ಮೊರೆ ಹೋಗಿದ್ದಳು. ಇದ್ರ ವಿಚಾರಣೆ ನಡೆಸಿದ ಕೋರ್ಟ್, ಇದರಿಂದ ಯಾವುದೇ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುವುದಿಲ್ಲ ಎಂದಿದೆ. ಎಲ್ಲ ಮಕ್ಕಳು ಈಜು ಕಲಿಯುವುದು ಬಹಳ ಮುಖ್ಯ ಎಂದ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಮುಸ್ಲಿಂ ಹುಡುಗಿಯರಿಗೆ ಪ್ರತ್ಯೇಕ ಈಜು ತರಬೇತಿ ಪಡೆಯಲು ರಿಯಾಯಿತಿ ಸಿಗುವುದಿಲ್ಲ ಎಂದಿದೆ. ಅರ್ಜಿ ಸಲ್ಲಿಸಿದ್ದ ಮಹಿಳೆಗೆ 94 ಸಾವಿರ ರೂಪಾಯಿ ದಂಡ ವಿಧಿಸಿರುವ ಕೋರ್ಟ್, ಮಕ್ಕಳನ್ನು ಈಜು ಕಲಿಸಲು ಕಳುಹಿಸುವಂತೆ ಸೂಚನೆ ನೀಡಿದೆ. ಸಾಮಾಜಿಕ ಏಕೀಕರಣಕ್ಕೆ ಇದು ಅನಿವಾರ್ಯ ಎಂದಿರುವ ಕೋರ್ಟ್, ಹುಡುಗರ ಜೊತೆ ಹುಡುಗಿಯರು ಈಜು ತರಬೇತಿ ಪಡೆಯಲೇಬೇಕೆಂದು ಹೇಳಿದೆ.

 

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...