alex Certify
ಕನ್ನಡ ದುನಿಯಾ       Mobile App
       

Kannada Duniya

ಈಗ ಪತ್ತೆಯಾದ್ರು 1942 ರಲ್ಲಿ ಕಾಣೆಯಾಗಿದ್ದ ದಂಪತಿ

swiss-dd

ಸ್ವಿಜರ್ ಲೆಂಡ್ ನಲ್ಲಿ ಬರೋಬ್ಬರಿ 75 ವರ್ಷಗಳ ಹಿಂದೆ ಕಾಣೆಯಾಗಿದ್ದ ದಂಪತಿಯ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಶವಗಳನ್ನು ಹಸ್ತಾಂತರಿಸಲಾಗಿದೆ.

ಇವರಿಬ್ಬರಿಗಾಗಿ ಬರೋಬ್ಬರಿ 75 ವರ್ಷಗಳ ಕಾಲ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದು, ನಂತರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಮಾರ್ಸೆಲಿನ್ ಮತ್ತು ಫ್ರಾನ್ಸಿಲಿನ್ ಡೆಮೊಲಿನ್ ದಂಪತಿಗೆ 7 ಮಕ್ಕಳಿದ್ದು, 1942 ರ ಆಗಸ್ಟ್ ನಲ್ಲಿ ಸ್ವಿಜರ್ ಲೆಂಡ್ ನ 2600 ಮೀಟರ್ ಎತ್ತರ ಆಲ್ಫ್ಸ್ ಪರ್ವತದಲ್ಲಿ ಹಸುಗಳನ್ನು ಹುಡುಕಲು ಹೋಗಿದ್ದ ಸಂದರ್ಭದಲ್ಲಿ ಭಾರೀ ಹಿಮಪಾತವಾಗಿ ಮೃತಪಟ್ಟಿದ್ದಾರೆ.

ಅವರಿಗಾಗಿ ಹುಡುಕಾಟ ನಡೆಸಲಾಗಿತ್ತಾದರೂ ಇಬ್ಬರ ಸುಳಿವು ಪತ್ತೆಯಾಗಿರಲಿಲ್ಲ. ಅವರ ಕಿರಿಯ ಪುತ್ರಿಗೆ ಈಗ 79 ವರ್ಷ.

ಮಂಜು ಕರಗಿದ ವೇಳೆ ಸ್ಥಳೀಯರಿಗೆ ಶವಗಳು ಕಂಡು ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದಾಗ, ಇವು 1942 ರಲ್ಲಿ ನಾಪತ್ತೆಯಾಗಿದ್ದ ದಂಪತಿಯ ಶವ ಎಂಬುದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...