alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ ಉಡುಪಿನಲ್ಲೇ ವಿಮಾನ ಏರಲು ಮುಂದಾದ ಪ್ರಯಾಣಿಕ

swim2-largeಚಾರಿಟಿಯೊಂದಕ್ಕೆ ನೆರವಾಗಲು ಏರ್ಪಡಿಸಲಾಗಿದ್ದ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವನೊಬ್ಬ ವಾಪಾಸ್ ವಿಮಾನದಲ್ಲಿ ಹೊರಟ ವೇಳೆ ಸಹ ಸ್ಪರ್ಧಿಗಳು ಒಳ ಉಡುಪಿನಲ್ಲೇ ವಿಮಾನದಲ್ಲಿ ಪ್ರಯಾಣಿಸಿದರೆ ತಮಗೆ ಬಂದ ಹಣವನ್ನೂ ಚಾರಿಟಿಗೆ ನೀಡುವುದಾಗಿ ಹೇಳಿದ್ದನ್ನೇ ಸವಾಲಾಗಿ ಸ್ವೀಕರಿಸಿ ಹಾಗೆಯೇ ವಿಮಾನದಲ್ಲಿ ಪ್ರಯಾಣಿಸಲು ಮುಂದಾದ ಘಟನೆ ದಕ್ಷಿಣ ಅಫ್ರಿಕಾದ ಮಾಲ್ವಿ ಏರ್ಪೋರ್ಟ್ ನಲ್ಲಿ ನಡೆದಿದೆ.

ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ Greig Bannatyne ವಾಪಾಸ್ ಹೊರಟ ವೇಳೆ ಮಾಧ್ಯಮದ ಕೆಲವರು ಇನ್ನೂ ಒಳ ಉಡುಪಿನಲ್ಲೇ ಇದ್ದುದರ ಕುರಿತು ಪ್ರಶ್ನಿಸಿದ್ದಾರೆ. ಆಗ ತಾನು ಸೂಕ್ತ ಉಡುಪು ತಂದಿಲ್ಲ. ಈಗ ಧರಿಸಬೇಕೆಂದು Greig Bannatyne ಹೇಳಿದ್ದಾನೆ.

ಇದೇ ಸಂದರ್ಭದಲ್ಲಿ ಆತನೊಂದಿಗಿದ್ದ ಸ್ನೇಹಿತರು ಇದೇ ಉಡುಪಿನಲ್ಲಿ ಬಂದರೆ ಚಾರಿಟಿಗೆ 2 ಸಾವಿರ ಪೌಂಡ್ ನೀಡುವುದಾಗಿ ಹೇಳಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿದ Greig Bannatyne ಹಾಗೆಯೇ ಏರ್ಪೋರ್ಟ್ ಗೆ ಬಂದಿದ್ದು, ಅಲ್ಲಿದ್ದವರು ಈತನ ಅವತಾರವನ್ನು ನೋಡಿ ಕಂಗಾಲಾಗಿದ್ದಾರೆ. ಆದರೆ ಆತನ ಉದ್ದೇಶವನ್ನು ಕೇಳಿದ ಬಳಿಕ ನಗುನಗುತ್ತಲೇ ಅನುಮತಿ ನೀಡಿದ್ದಾರೆ. ಆದರೆ ಸೌತ್ ಅಫ್ರಿಕಾ ಏರ್ವೇಸ್ ವಿಮಾನ ಸಿಬ್ಬಂದಿ ಇದಕ್ಕೆ ನಿರಾಕರಿಸಿದ್ದು, ಅಂತಿಮವಾಗಿ Greig Bannatyne ಮೇಲಂಗಿ ಹಾಗೂ ಶಾರ್ಟ್ಸ್ ಧರಿಸಿ ಪ್ರಯಾಣಿಸಿದ್ದಾನೆ. ಇದಾದ ಬಳಿಕವೂ ಪಂಥ ಕಟ್ಟಿದ ಸ್ನೇಹಿತರು ಕೊಟ್ಟ ಮಾತಿನಂತೆ ಚಾರಿಟಿಗೆ 2 ಸಾವಿರ ಪೌಂಡ್ ನೀಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...