alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರೀಜರ್ ಲಾರಿಯಲ್ಲಿದ್ದರು ನಿರಾಶ್ರಿತರು

suspected-migrants-found-in-freezer-lorry-at-m25-servicesಭಯೋತ್ಪಾಕರ ದಾಳಿಗೆ ತತ್ತರಿಸಿರುವವರು ಸುರಕ್ಷಿತ ನೆಲೆಗಳನ್ನರಿಸಿಕೊಂಡು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ಅದಕ್ಕಾಗಿ ತಮ್ಮ ಜೀವವನ್ನೇ ಪಣವಾಗಿಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಈಗಾಗಲೇ ಹಲವರು ಸಾವನ್ನಪ್ಪಿರುವ ಮಧ್ಯೆ ಮತ್ತೊಂದು ಮನಕಲಕುವ ಘಟನೆ ವರದಿಯಾಗಿದೆ.

ಯುನೈಟೆಡ್ ಕಿಂಗ್ ಡಂ ನಲ್ಲಿ ಫ್ರೀಜರ್ ಲಾರಿಯೊಂದನ್ನು ಪರಿಶೀಲಿಸಿದ ವೇಳೆ ಅದರಲ್ಲಿ ಓರ್ವ ಬಾಲಕ ಸೇರಿದಂತೆ 14 ಮಂದಿ ಅಕ್ರಮವಾಗಿ ಗಡಿ ದಾಟಿ ಪ್ರವೇಶಿಸುತ್ತಿರುವುದು ಪತ್ತೆಯಾಗಿದೆ. ಯಾವುದೇ ಒಂದು ದೇಶವನ್ನು ಪ್ರವೇಶಿಸಬೇಕಾದರೆ ಸೂಕ್ತ ದಾಖಲೆಗಳನ್ನು ಹೊಂದಬೇಕಿರುವುದು ಕಡ್ಡಾಯವಾಗಿದ್ದು, ಇವರೆಲ್ಲರೂ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಕಾರಣ ಬಂಧನಕ್ಕೊಳಗಾಗಿದ್ದಾರೆ.

ಇವರುಗಳು ಫ್ರೀಜರ್ ಲಾರಿಯಲ್ಲಿರುವುದು ಚಾಲಕನಿಗೂ ಅರಿವಿರಲಿಲ್ಲವೆನ್ನಲಾಗಿದ್ದು, ಆರ್ತನಾದ ಕೇಳಿದ ಆತ, ಲಾರಿ ನಿಲ್ಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ನಿರಾಶ್ರಿತರಿಂದ ಹಣ ಪಡೆದಿದ್ದ ಏಜೆಂಟ್, ಅವರುಗಳನ್ನು ಸಾಗಿಸಲು ಲಾರಿಯ ಫ್ರೀಜರ್ ಕಂಟೇನರ್ ನಲ್ಲಿ ಅಡಗಿಸಿಟ್ಟಿರಬಹುದೆಂದು ಶಂಕಿಸಲಾಗಿದೆ. 15 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಈಗ ಆಸ್ಪತ್ರೆಗೆ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...