alex Certify
ಕನ್ನಡ ದುನಿಯಾ       Mobile App
       

Kannada Duniya

ಉಜ್ಜೇಕಿಸ್ತಾನದಲ್ಲಿ ಬಾಲಿವುಡ್ ಅಭಿಮಾನಿ ಭೇಟಿಯಾದ ಸುಷ್ಮಾ ಸ್ವರಾಜ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸದ್ಯ ಮಧ್ಯ ಏಷ್ಯಾ ದೇಶಗಳ ಪ್ರವಾಸದಲ್ಲಿದ್ದಾರೆ. ಶನಿವಾರ ಸುಷ್ಮಾ ಸ್ವರಾಜ್ ಉಜ್ಜೇಕಿಸ್ತಾನಕ್ಕೆ ಭೇಟಿ ನೀಡಿದ್ದರು. ಉಜ್ಜೇಕಿಸ್ತಾನದಲ್ಲಿ ವೃದ್ಧ ಮಹಿಳೆಯೊಬ್ಬರ ಭೇಟಿ ಸುಷ್ಮಾ ಪ್ರವಾಸವನ್ನು ಮತ್ತಷ್ಟು ಖುಷಿಗೊಳಿಸಿದೆ.

ಉಜ್ಜೇಕಿಸ್ತಾನದಲ್ಲಿ ಬಾಲಿವುಡ್ ಹಾಗೂ ಹಾಲಿವುಡ್ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಬಾಲಿವುಡ್ ಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸುವ ಮಂದಿ ಮಕ್ಕಳಿಗೆ ನಟರ ಹೆಸರಿಟ್ಟಿದ್ದಾರೆ. ಬಾಲಿವುಡ್ ಚಿತ್ರವನ್ನು ಹೆಚ್ಚು ಮೆಚ್ಚಿಕೊಂಡಿರುವ ಅಭಿಮಾನಿಯೊಬ್ಬರನ್ನು ಸುಷ್ಮಾ ಪ್ರವಾಸದ ವೇಳೆ ಭೇಟಿಯಾಗಿದ್ದರು. ವೃದ್ಧ ಮಹಿಳೆ ಬಾಲಿವುಡ್ ಚಿತ್ರಗಳು ಹಾಗೂ ಹಾಡುಗಳನ್ನು ಸರಾಗವಾಗಿ ಹಾಡ್ತಾರೆ. ಸುಷ್ಮಾ ಮುಂದೆ ರಾಜ್ ಕಪೂರ್ ಚಿತ್ರದ ಹಾಡೊಂದನ್ನು ಹಾಡಿ ತೋರಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಸುಷ್ಮಾ ಹಾಗೂ ಮಹಿಳೆ ಇರುವ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ. ಬಾಲಿವುಡ್ ಗೆ ಯಾವುದೇ ಗಡಿಯಿಲ್ಲ. ಉಜ್ಜೇಕಿಸ್ತಾನದಲ್ಲಿ ಕೂಡ ರಾಜ್ ಕಪೂರ್, ನರ್ಗೀಸ್ ಹೆಸರು ಕೇಳಬಹುದು ಎಂದು ರವೀಶ್ ಕುಮಾರ್ ಬರೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...