alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್ಡರ್ ಮಾಡದೇ ಇದ್ರೂ ಬಂತು ಭಾರೀ ಬೆಲೆಯ ಪರ್ಸ್

purse

ನೀವು ನಿರೀಕ್ಷಿಸದೇ ಇದ್ದ ವಸ್ತು ನಿಮ್ಮ ಮನೆಬಾಗಿಲಿಗೇ ಬಂದು ತಲುಪಿದ್ರೆ ಹೇಗಿರತ್ತೆ? ಅದ್ರಲ್ಲೂ ತುಂಬಾ ದುಬಾರಿ ವಸ್ತುವಾಗಿದ್ರೆ? ನೀಮನ್ ಮಾರ್ಕಸ್ ನ 40,000 ಡಾಲರ್ ಮೌಲ್ಯದ ಪರ್ಸ್ ಗಳು ಸಿಕ್ಕಿದ್ರೆ ಖುಷಿಯಾಗೋದು ಸಹಜ.

ನಮ್ಮದಲ್ಲ ಅಂತ ಅದನ್ನು ಹಿಂದಿರುಗಿಸೋದಕ್ಕೂ ಮನಸ್ಸು ಬರೋದಿಲ್ಲ. ತುಂಬಾ ಚೆನ್ನಾಗಿದೆ, ಕಾಸ್ಟ್ಲಿ ಬೇರೆ, ಸುಮ್ಮನೆ ಇಟ್ಕೊಂಬಿಡೋಣ ಎನಿಸುತ್ತೆ. ಆದ್ರೆ ಮ್ಯಾಟ್ ಹ್ವಾಂಗ್ ಮಾತ್ರ ತುಂಬಾನೇ ಪ್ರಾಮಾಣಿಕ ವ್ಯಕ್ತಿ.

ಮ್ಯಾಟ್ ಹ್ವಾಂಗ್ ಆನ್ ಲೈನ್ ನಲ್ಲಿ ಪರ್ಸ್ ಆರ್ಡರ್ ಮಾಡಿರಲಿಲ್ಲ. ಆದ್ರೆ ನೀಮನ್ ಮಾರ್ಕಸ್ ಕಂಪನಿಯ ಸಿಬ್ಬಂದಿಯ ಪ್ರಮಾದದಿಂದಾಗಿ ಪರ್ಸ್ ಆತನ ಮನೆಗೆ ಡೆಲಿವರಿಯಾಗಿತ್ತು. ಕೊನೆಗೆ ಈ ದುಬಾರಿ ಪರ್ಸ್ ಗಳನ್ನು ಮ್ಯಾಟ್ ನೀಮನ್  ಮಾರ್ಕಸ್ ಕಂಪನಿಗೆ ಹಿಂದಿರುಗಿಸಿದ್ದಾನೆ.

ಇವನ ಪ್ರಾಮಾಣಿಕತೆ ನೋಡಿ ಕಂಪನಿಯ ಉದ್ಯೋಗಿಗಳೆಲ್ಲ ಬೆಕ್ಕಸ ಬೆರಗಾಗಿದ್ರು. ಕಂಪನಿಯಲ್ಲಿರೋ ತಾಂತ್ರಿಕ ದೋಷದಿಂದಾಗಿ ಈ ಹಿಂದೆ ಕೂಡ ಹಲವು ಬಾರಿ ಇದೇ ರೀತಿಯ ಯಡವಟ್ಟುಗಳಾಗಿವೆ. ಆದ್ರೆ ಇದುವರೆಗೂ ಅದನ್ನು ಸರಿಪಡಿಸಿಕೊಳ್ಳಲು ಸಂಸ್ಥೆ ಮುಂದಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...