alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿಗಳ ಲಿವರ್ ಮೇಲೆ ತನ್ನ ಹೆಸರು ಕೆತ್ತಿದ್ದ ವೈದ್ಯನಿಗಿಲ್ಲ ಶಿಕ್ಷೆ…!

ಇಬ್ಬರು ರೋಗಿಗಳ ಲಿವರ್ ಮೇಲೆ ತನ್ನ ಹೆಸರಿನ ಮೊದಲಕ್ಷರಗಳನ್ನು ಕೆತ್ತಿದ್ದ ವೈದ್ಯ ಸಿಮೊನ್ ಬ್ರಾಹ್ಮಲ್ ಜೈಲು ಶಿಕ್ಷೆಯನ್ನು ತಪ್ಪಿಸಿಕೊಂಡಿದ್ದಾನೆ. ತಪ್ಪೊಪ್ಪಿಕೊಂಡಿರೋದ್ರಿಂದ ಆತನಿಗೆ 10,000 ಪೌಂಡ್ ದಂಡ ವಿಧಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಡಾಕ್ಟರ್ ಸಿಮೊನ್ ರೋಗಿಗಳ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಅಂತಾ ಅಭಿಪ್ರಾಯಪಟ್ಟಿದ್ದಾರೆ. 2013ರ ಫೆಬ್ರವರಿ ಮತ್ತು ಆಗಸ್ಟ್ ನಲ್ಲಿ ನಡೆದ 2 ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ವೈದ್ಯ ಸಿಮೊನ್ ಈ ಕೃತ್ಯ ಎಸಗಿದ್ದ.

ರೋಗಿಗಳಿಗೆ ಅನಸ್ತೇಶಿಯಾ ಕೊಟ್ಟು ಆಪರೇಷನ್ ಮಾಡುವಾಗ ಅವರ ಲಿವರ್ ಮೇಲೆ ತನ್ನ ಇನಿಶಿಯಲ್ ಕೆತ್ತಿದ್ದ. ಅದರಲ್ಲಿ ಓರ್ವನ ಲಿವರ್ ಫೇಲ್ ಆಗಿತ್ತು. ಇನ್ನೋರ್ವ ವೈದ್ಯ ತಪಾಸಣೆ ಮಾಡುವ ಸಂದರ್ಭದಲ್ಲಿ ಲಿವರ್ ಮೇಲೆ ಎಸ್ ಬಿ ಎಂಬ ಅಕ್ಷರವನ್ನು ಕೆತ್ತಿರುವುದನ್ನು ಗಮನಿಸಿದ್ದ.

ಕ್ವೀನ್ ಎಲಿಜಬೆತ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯನಾಗಿದ್ದ ಸಿಮೊನ್ 2014ರಲ್ಲಿ ರಾಜೀನಾಮೆ ನೀಡಿದ್ದ. ಆತ ರೋಗಿಗಳ ಲಿವರ್ ಮೇಲೆ ಅಕ್ಷರವನ್ನು ಕೆತ್ತುತ್ತಿರುವುದನ್ನು ಗಮನಿಸಿದ ನರ್ಸ್ ಆಗಲೇ ಆತನನ್ನು ಪ್ರಶ್ನಿಸಿದ್ಲು. ಆದ್ರೆ ನಾನು ಇದನ್ನೆಲ್ಲ ಮಾಡುತ್ತೇನೆ ಅಂತಾ ಸಿಮೊನ್ ಧಿಮಾಕಿನಿಂದ ಉತ್ತರಿಸಿದ್ದ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...